ರಾಯಚೂರು. ಬರ ಹಾಗೂ ನೀರಿನ ಕೊರತೆಯಿಂದ ಭತ್ತ, ಜೋಳ, ತೊಗರಿ ಮತ್ತಿತರ ಬೆಳೆಗಳು ಒಣಗಿವೆ. ರೈತರು ಸಂಪೂರ್ಣ ಬೆಳೆ ನಷ್ಟದಲ್ಲಿದ್ದಾರೆ. ರೈತರ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಶಾಸಕ ಅರವಿಂದ್ ಬೆಲ್ಲದ ಹೇಳಿದರು.
ಮಾನವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿ ನಂತರ ಮಾತನಾಡಿದರು,
ಜಿಲ್ಲೆಯಲ್ಲಿ ಸಾಕಷ್ಟು ಬರ ಆವರಿಸಿದ್ದು ಬೆಳೆ ನಷ್ಟ ಉಂಟಾಗಿದೆ, ಈ ಬಗ್ಗೆ ಬರ ಅಧ್ಯಯನ ಮಾಡ ಬೇಕಾದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ, ಬರ ಪೀಡಿತ ಪ್ರದೇಶಗಳಿಗೆ ಜಿಲ್ಲೆಯ ಸಚಿವರು ಭೇಟಿ ಮಾಡುತ್ತಿಲ್ಲ, ಬರ ಅಧ್ಯಯನ ನಡೆಸದೇ
ಬರ ನಿರ್ವಹಣೆಗೆ ಜಿಲ್ಲೆಗೆ ಕೇವಲ 9 ಕೋಟಿ ಬಿಡುಗಡೆ ಮಾಡಿರುವುದು ಸಾಕಾಗುವುದಿಲ್ಲ. ಇನ್ನು ಹೆಚ್ಚಿನ ಅನುದಾನ ಜಿಲ್ಲೆಗೆ ಬಿಡುಗಡೆ ಮಾಡಬೇಕು ಎಂದು ಹೇಳಿದರು.