ರಾಯಚೂರು. ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ದಲ್ಲಿ ತೊಡಗಿದ್ದ ವೇಳೆ ಪೋಲಿಸರು ದಾಳಿ ನಡೆಸಿ 51 ಪ್ರಕರಣ ದಾಖಲಿಸಿಕೊಂಡು 417 ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿ ದ್ದಾರೆ.
ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ಜೂಜಾಟದಲ್ಲಿ ತೊಡ ಗಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸ ಲಾಗಿದೆ, ಜೂಜಾಟದಲ್ಲಿ 1 ಕೋಳಿ ಪಂದ್ಯಾ, 1 ಮನೆಯಲ್ಲಿ ಜೂಜಾಟ, 49 ಸಾರ್ವಜನಿಕ ಸ್ಥಳದ ಲ್ಲಿ ಜೂಟಾಟ ಪಕರಣಗ ಳನ್ನು ಒಳಗೊಂಡಂತೆ ಒಟ್ಟು 51 ಪ್ರಕರಣಗಳನ್ನು ದಾಖಲಿಸಿ 417 ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದೆ.
ದಾಳಿ ವೇಳೆ 5,67,280 ರೂ,ಗಳನ್ನು ಮತ್ತು ಎರಡು ಕೋಳಿ ಹುಂಜಗಳನ್ನು ಜಪ್ತಿ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಇಸ್ಪೀಟು ಜೂಜಾಟದಲ್ಲಿ ತೊಡಗುವವರ ವಿರುದ್ಧ ನ.10 ರಿಂದ 15ರವರಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹಾಗೂ ಸಂಬಂಧಿಸಿದ ಪೊಲೀಸ್ ಉಪಾಧೀಕ್ಷಕರವರ ಮಾರ್ಗದರ್ಶನ ದಲ್ಲಿ ಠಾಣಾ ಮಟ್ಟದಲ್ಲಿ ಇಸ್ಪೀಟು ಜೂಜಾಟ ತಡೆಗಟ್ಟಲು ವಿಶೇಷ ತಂಡಗಳನ್ನು ರಚಿಸಲಾ ಗಿತ್ತು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೀಪ ಕಾಯು ವ ನೆಪದಲ್ಲಿ ಇಸ್ಪೀಟು ಜೂಜಾಟ ಆಡುವುದು, ಆಡಿಸುವುದು, ಮತ್ತು ಸ್ಥಳಾವಕಾಶ ಮಾಡಿ ಕೊಡುವುದು ಕಾನೂನು ರೀತಿ ಅಪರಾಧ ಈ ಬಗ್ಗೆ ಮುಂಚಿತವಾಗಿ ಜಿಲ್ಲೆಯಾದ್ಯಂತ ಸಾರ್ವಜನಿ ಕರಿಗೆ ಠಾಣಾ ಮಟ್ಟದಲ್ಲಿ ಅರಿವು ಮೂಡಿಸ ಲಾಗಿತ್ತು. ಆದರೂ ಸಹ ಜೂಜಾಟದಲ್ಲಿ ತೊಡಗಿದ್ದರ ಮೇಲೆ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದ್ದಾರೆ.