ರಾಯಚೂರು. ಇತ್ತೀಚೆಗೆ ಸುರಿದ ಮಳೆಗೆ 5,100 ಹೆಕ್ಟರ್ ಭತ್ತ ಹಾನಿ, ಮಳೆಯಿಲ್ಲದೆ ಸುಮಾರು 2 ಲಕ್ಷ 15ಸಾವಿರ ಹೆಕ್ಟೇರ್ ಮುಂಗಾರು ಬೆಳೆಗಳು ಹಾನಿಯಾಗಿದ್ದು, ಕೇಂದ್ರಕ್ಕೆ 17 ಸಾವಿರ ಕೋಟಿ ಬರ ಪರಿಹಾರ ಕೇಳಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.
ತಾಲೂಕಿನ ಗೋನಾಳ ಗ್ರಾಮದಲ್ಲಿ ಬರ ಪರಿಶೀ ಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು, ಜಿಲ್ಲೆಯಲ್ಲಿ ಬರಗಾಲ ಬೆಳೆ ಸಮೀಕ್ಷೆ ನಡೆಸಲಾಗುದೆ, ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಿಂದಾಗಿ ಹಾಗೂ ಮಳೆ ಯಾಗದೇ ಇರುವುದರಿಂದ ಬರದಿಂದ ಸಾಕಷ್ಟು ನಷ್ಟವಾಗಿದೆ ಎಂದರು.
ರೈತರ ಹೊಲದಲ್ಲಿ ರೈತರೊಂದಿಗೆ ಮಾತನಾಡಿ ದ್ದೇನೆ, ಬೆಳೆಗೆ ಖರ್ಚು ವೆಚ್ಚ ಮಾಡಿದ ಕುರಿತು ಮಾಹಿತಿ ಪಡೆದಿವೆ, ತಾಲ್ಲೂಕು ಸೇರಿದಂತೆ ಜಿಲ್ಲೆಯ ಬೆಳೆ ನಾಶದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಕೊಳ್ಳಲಾಗಿದೆ,ಹತ್ತಿ, ತೊಗರಿ, ಸಜ್ಜೆ ಮತ್ತು ಜೋಳ ಬೆಳೆ ವೀಕ್ಷಣೆ ಸಂದರ್ಭದಲ್ಲಿ ಹಾನಿ ಯಾಗಿದ್ದು ಕಂಡು ಬಂದಿದೆ ಎಂದು ತಿಳಿಸಿದರು.
ಇತ್ತೀಚೆಗೆ ಸುರಿದ ಮಳೆಗೆ ಸುಮಾರು 5,100 ಹೆಕ್ಟರ್ ಭತ್ತ ಮತ್ತು ಮಳೆಯಿಲ್ಲದೆ 2 ಲಕ್ಷ 15 ಸಾವಿರ ಹೆಕ್ಟೇರ್ ಮುಂಗಾರು ಬೆಳೆಗಳು ಹಾನಿಯಾಗಿದೆ, ಹಿಂಗಾರು ಬೆಳೆಹಾನಿ ಕುರಿತು ಸಮೀಕ್ಷೆ ನಡೆದಿದೆ ಎಂದರು.
ಬರಗಾಲದ ಕುರಿತು ಸಂಪೂರ್ಣ ವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ,
ಕಂದಾಯ ಸಚಿವರ ಜೊತೆ ಮಾತನಾಡಿದ್ದು, ಎಸ್‌ಡಿಆರ್‌ಎಫ್ ನಲ್ಲಿ ಹಣ ಬಿಡುಗಡೆಗೆ, ಕೇಂದ್ರಕ್ಕೆ 17 ಸಾವಿರ ಕೋಟಿ ಬರ ಪರಿಹಾರ ಕೇಳಿದ್ದೇವೆ ಎಂದು ತಿಳಿಸಿದರು.