ರಾಯಚೂರು. ಮಸೀದಿ ಮೇಲೆ ಮದ್ಯದ ಬಾಟಲಿ ಎಸೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ, ರಂಗನಾಥ ಸೇರಿ 7 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರು ತಿಳಿಸಿದ್ದಾರೆ.
ಕಳೆದ ರಾತ್ರಿ ಸಿರವಾರ ಪಟ್ಟಣದ ಬಸ್ ನಿಲ್ದಾ ಣದ ಹತ್ತಿರ ಇರುವ ಫಿರ್ದೋಸ್ ಮಸೀದಿಯ ಪ್ರಾರ್ಥನಾ ಸ್ಥಳದಲ್ಲಿ ಸಮಾಜದಲ್ಲಿ ಶಾಂತಿ ಕದಡಿಸುವ ಉದ್ದೇಶದಿಂದ ಮಸೀದಿಯ ಗ್ರೀಲ್‌ಗೆ ಮಧ್ಯದ ಬಾಟಲಿಯನ್ನು ಎಸೆದಿದ್ದರಿಂದ ಮಸೀದಿ ಯಗೆ ಅಳವಡಿಸಿದ ಗಾಜು ಪುಡಿಯಾಗಿವೆ. ಈ ಬಗ್ಗೆ ಸಿರವಾರ ಪಟ್ಟಣದ ಪೈಜಲ್ ಇವರು ಸಿರವಾರ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಭೇಟಿ ನೀಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿತರ ಪತ್ತೆಗೆ ಡಿಎಸ್‌ಪಿ ಸಿಂಧನೂರು ರವರ ನೇತೃತ್ವದಲ್ಲಿ 2 ತಂಡಗಳು ರಚಿಸಲಾಗಿತ್ತು. 7 ಜನ ಆರೋಪಿತರನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ.ಅದರಲ್ಲಿ ಒಟ್ಟು 6 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಒಬ್ಬ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನು ಇದ್ದುದ್ದರಿಂದ ಬಾಲಾ ನ್ಯಾಯಮಂಡಳಿ ಮುಂದೆ ಹಾಜರುಪಡಿಸಲಾಗಿದೆ.
ಸಿರವಾರ ಪಟ್ಟಣದಲ್ಲಿ ಮುಂಜಾಗೃತ ಕ್ರಮವಾಗಿ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಬಂದೋ ಬಸ್ತ ಕರ್ತವ್ಯಕ್ಕೆ ನಿಯೋಜಿಸಿದ್ದು ಪರಿಸ್ಥಿತಿಯು ಶಾಂತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.