ರಾಯಚೂರು.ಕಾರು ಆಟೋ ನಡುವೆ ಡಿಕ್ಕಿ ಆರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಜ್ಯ ಹೆದ್ದಾರಿ ಬಳಿ ನಡೆದಿದೆ.
ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಒರ್ವ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದು, ಕೋಮಾ ಸ್ಥಿತಿಗೆ ಹೋಗಿದ್ದ ಗಾಯಾಳು ಮಧುಸೂದನ್ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಬೀರಲಿಂಗಪ್ಪ ಎಂಬುವವರ ಕಾಲು ಮುರಿದು ಹೋಗಿದೆ.
ಗಾಯಗೊಂಡಿವರು ನಾಗಮ್ಮ, ಬಸಮ್ಮ, ಉಮಾದೇವಿ, ಸುರೇಶ್ ಎಂದು ತಿಳಿದು ಬಂದಿದೆ.
ಮರ್ಚಡ್ ಗ್ರಾಮದಿಂದ ರಾಯಚೂರಿಗೆ ಬರುತ್ತಿದ್ದ ಆಟೋಗೆ ಅತೀವೇಗದಲ್ಲಿದ್ದ ಕಾರು ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಬವಿಸಿದೆ.ಗಾಯಾಳುಗಳು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬವಿಸಿದೆ.