ಕಲಬುರಗಿ. ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನವು ಪದವೀಧರ ಕ್ಷೇತ್ರದ ಮತದಾನವು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ನಡೆಯಿತು.
ಕಲಬುರ್ಗಿ, ಯಾದಗಿರಿ, ಬಿದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಮತ್ತು ವಿಜಯನಗರಗಳಲ್ಲಿನ 195 ಮತಗಟ್ಟೆಗಳಲ್ಲಿ (160 ಪ್ರಮುಖ ಮತ್ತು 35 ಸಹಾಯಕ) ಮತದಾನವು ಶಾಂತಿಯುತ ವಾಗಿ ಪೂರ್ಣಗೊಂಡಿದ್ದು, ಒಟ್ಟಾರೆಯಾಗಿ ಅಂದಾಜು 69.51 ಪ್ರತಿಶತಃ ಮತದಾನವಾ ಗಿರುತ್ತದೆ. ಜಿಲ್ಲಾವಾರು ಮತದಾನದ ವಿವರ ಕೆಳಗಿನಂತಿದೆ.
ಕಲಬುರಗಿ 66.90, ಬೀದರ 69.74, ರಾಯ ಚೂರು 71.28, ಬಳ್ಳಾರಿ 66.86, ಯಾದಗಿರಿ 61.38, ಕೊಪ್ಪಳ 81.61, ವಿಜಯನಗರ
72.76, ಮತದಾನ ವಾಗಿದ್ದು, ಒಟ್ಟು 69.51 ಮತದಾನವಾಗಿದೆ.
2018ರ ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ 82,054 ಮತದಾರರು ಇದ್ದರು. ಆದರೇ 2024ರ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಶೇ 91 ಹೆಚ್ಚಾಗಿ 156,623 ಕ್ಕೆ ಏರಿದೆ ಪ್ರಸ್ತುತ ಚುನಾವ ಣೆಯಲ್ಲಿ ಮತದಾನದ ಪ್ರಮಾಣವು ಶೇ. 69.51 ಆಗಿದ್ದು, ಹಿಂದಿನ 2018ರ ಚುನಾವಣೆಯಲ್ಲಿ ಶೇ.67.5 ರಷ್ಟು ಮತದಾನದ ಪ್ರಮಾಣಕ್ಕಿಂತ ಅಧಿಕವಿರುತ್ತದೆ ಎಂದು ಪ್ರಾದೇಶಿಕ ಆಯುಕ್ತ,
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಧಿಕಾರಿಗಳು ತಿಳಿಸಿದ್ದಾರೆ.