ರಾಯಚೂರು. ಚಿನ್ನ ಉತ್ಪಾದನೆಗೆ ಗಣಿ ಕಂಪನಿಗೆ ನೀರಿನ ವ್ಯವಸ್ಥೆಗಾಗಿ 90 ಕೋಟಿ ಕ್ರೀಯಾ ಯೋಜನೆ ಯನ್ನು ತಯಾರಿಸಿ ಸರಕಾರಕ್ಕೆ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್ಯ ಶೆಟ್ಟಣ್ಣನವರ್ ಹೇಳಿದರು.
ಗಣಿ ಕಂಪನಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಹಟ್ಟಿಚಿನ್ನದಗಣಿ ಕಂಪನಿಯಲ್ಲಿ ಪ್ರತಿ 10 ಗ್ರಾಂ. ಚಿನ್ನ ಉತ್ಪಾದನೆ ಮಾಡಲು 40 ಸಾವಿರ ವೆಚ್ಚವಾಗುತ್ತಿದ್ದು, ವೆಚ್ಚವನ್ನು ತಗ್ಗಿಸಲು ಉತ್ಪಾದನೆ ಹೆಚ್ಚಿಸಬೇಕಾ ಗಿದೆ ಎಂದರು.
ಚಿನ್ನದ ಗಣಿ ಕಂಪನಿಯಲ್ಲಿ ನೌಕರರು ಚಿನ್ನ ಉತ್ಪಾದನೆಗೆ ಕೈ ಜೋಡಿಸುತ್ತಿಲ್ಲ, ಅನವಶಕ್ಕಾಗಿ ಗೈರಾಗುತ್ತಿದ್ದಾರೆ. ಇಂತಹ ನೌಕರರ ಮೇಲೆ ಕಠಿಣ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಐಟಿಐ, ಡಿಪ್ಲೊಮಾ ವಿದ್ಯಾರ್ಹತೆ ಪಡೆದ 163 ಹುದ್ದೆಗಳನ್ನು ಅತಿ ಶೀಘ್ರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ, ಆಸ್ಪತ್ರೆ ಸಿಬ್ಬಂದಿಗಳ ಕೊರತೆ ನೀಗಿಸಲು ನೇಮಕಾತಿಯ ಅವಶ್ಯಕತೆ ಇದೆ, ಈ ಕುರಿತು ಗಣಿ ನಿರ್ದೇಶಕ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ಈ ಹಿಂದೆ 37 ಅಧಿಕಾರಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹಾಗೂ ನಕಲಿ ಅಂಕ ಪಟ್ಟಿ ಸಲ್ಲಿಸಿ ನೇಮಕ ಮಾಡಿಕೊಂಡಿದೆ ಎಂದು ಆರೋಪಿಸಲಾಗಿತ್ತು, ಯಾವುದೇ ಗೊಂದಲ ಬೇಡ ಅಂತಹ ನಡೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.