ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆಗೂ ಮುನ್ನ ನೀಡಿದ ಐದು ಗ್ಯಾರಂಟಿ ಭರವಸೆಗಳ ಪೈಕಿ ಅನ್ನಭಾಗ್ಯ ಯೋಜನೆಯೂ ಒಂದಾಗಿದ್ದು, ಈ ಯೋಜನೆಯಡಿ 10ಕೆ.ಜಿ ಅಕ್ಕಿಯನ್ನು ನೀಡುವುದಾಗಿ ಭರವಸೆ ನೀಡಿತ್ತು ಇದೀಗ ಅಕ್ಕಿ ಕೊರತೆಯಿಂದಾಗಿ ಐದು ಕೆ.ಜಿ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದ್ದು, ಇಂದು (ಜು.10)ಕ್ಕೆ ಹಣ ಜಮಾವಣೆ ಮಾಡುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ ಸಿಗಲಿದೆ.
ಅಕ್ಕಿಯ ಹಣವನ್ನು ಕೇವಲ ಪಡಿತರ ಅಗತ್ಯವಿರುವ ಕುಟುಂಬಕ್ಕೆ ನೀಡುವ ವಿಚಾರ ಇದೀಗ ಕೇಳಿಬರುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಒಮ್ಮೆಯಾದರೂ ಪಡಿತರ ಧಾನ್ಯ ಪಡೆದುಕೊಂಡಿರಬೇಕು.
ಹೌದು ಪಡಿತರ ಅಗತ್ಯವಿರುವ ಕುಟುಂಬಗಳಿಗರ ಮಾತ್ರ ಹಣ ವರ್ಗಾವಣೆ ಮಾಡುವ ಯೋಜನೆ ರೂಪಿಸಿರುವ ರಾಜ್ಯ ಸರ್ಕಾರ ಈ ರೀತಿಯ ಕ್ರಮ ಕೈಗೊಳಲು ಮುಂದಾಗಿದೆ.
ಅಂದಹಾಗೆ ಸರ್ಕಾರ ಯಾವ ಖಾತೆಗೆ ಹಣ ವರ್ಗಾವಣೆ ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿಯೂ ಮೂಡಿರುತ್ತದೆ.
ಪಡಿತರ ಚೀಟೀಯ ಮುಖ್ಯಸ್ಥರ ಆಧಾರ ಕಾರ್ಡ್ ಗೆ ಲಿಂಕ್ ಇರುವ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅಥವಾ ರೇಷನ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಮಾಹಿತಿಗಳನ್ನು ಲಿಂಕ್ ಮಾಡಿಸುವ ಅಗತ್ಯವಿಲ್ಲ.
ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಅಥವಾ ಮುಖ್ಯಸ್ಥರೇ ಇಲ್ಲದ ರೆಷನ್ ಕಾರ್ಡ್ ಗೆ ಈ ಹಣ ವರ್ಗಾವಣೆ ಅನ್ವಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿದ ಪಡಿತರ ಚೀಟಿ ಇದ್ದರೆ ಆಹಾರ ಇಲಾಖೆಗೆ ಭೇಟಿ ನೀಡಬಹುದಾಗಿದೆ.