Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ನಗರಸಭೆ ಬೀದಿ ದೀಪಗಳ ಟೆಂಡರ್ ಲೋಪ: ಪೌರಾಯುಕ್ತ ಡಾ.ಗುರುಲಿಂಗಪ್ಪ, ರಮೇಶ ನಾಯಕ ಅಮಾನತ್

ನಗರಸಭೆ ಬೀದಿ ದೀಪಗಳ ಟೆಂಡರ್ ಲೋಪ: ಪೌರಾಯುಕ್ತ ಡಾ.ಗುರುಲಿಂಗಪ್ಪ, ರಮೇಶ ನಾಯಕ ಅಮಾನತ್
ರಾಯಚೂರು, ಜು.೧೩- ನಗರದ ಬೀದಿದೀಪಗಳ ಟೆಂಡರ್‌ನಲ್ಲಿ ಲೋಪ ಎಸಗಿ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ನಗರಸಭೆ ಆಯುಕ್ತ ಡಾ.ಗುರುಲಿಂಗಪ್ಪ ಹಾಗೂ ಹಿಂದಿನ ಪೌರಾಯುಕ್ತ ರಮೇಶ.ಎಸ್.ನಾಯಕ ಇವರನ್ನು ಅಮಾನತ್‌ಗೊಳಿಸಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಮಂಜುಳಾ ಆದೇಶಿಸಿದ್ದಾರೆ.
೨೦೧೭-೧೮ಸಾಲಿನಲ್ಲಿ ೧೪ ನೇ ಹಣಕಾಸು ಯೋಜನೆಯಡಿ ಎಲ್‌ಇಡಿ ಬಲ್ಬ್ ಅಳವಡಿಸುವ ಕಾಮಗಾರಿಯಲ್ಲಿ ನಡೆಸಿದ ಅವ್ಯವಹಾರದ ಕುರಿತು ನಡೆದ ತನಿಖೆಯಲ್ಲಿ ಆರೋಪ ಸಾಬೀತಾಗಿರುವದರಿಂದ ಇಲಾಖಾ ತನಿಖೆಯನ್ನು ಕಾಯ್ದಿರಿಸಿ ಇರ್ವರನ್ನು ಸೇವೆಯಿಂದ ಅಮಾನತ್‌ಗೊಳಿಸಿ ಆದೇಶ ನೀಡಿದ್ದಾರೆ.
ನಗರದ ಚಂದ್ರಮೌಳೇಶ್ವರ ವೃತ್ತದಿಂದ ಗಂಜ್ ವೃತ್ತದವರೆಗೆ ಎಲ್‌ಇಡಿ ಬಲ್ಬ ಅಳವಡಿಸಲು ಟೆಂಡರ್ ಕಾಮಗಾರಿಯಲ್ಲಿ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಅಂದಾಜು ಪಟ್ಟಿಗಿಂತ ಶೇ.೪೮ರಷ್ಟು ಕಡಿಮೆ ದರ ನಮೂದಿಸಿದ್ದರೂ ಎಲ್ ೪ ಗುತ್ತಿಗೆದಾರರಿಗೆ ಅಂದಾಜು ಪಟ್ಟಿ ದರಗಳಿಗೆ ಟೆಂಡರ ನೀಡಿ ೩,೩೯,೪೬೨೩ ರೂ ಆರ್ಥಿಕ ನಷ್ಟವಾಗಲು ಕಾರಣರಾದ ಪೌರಾಯುಕ್ತ ಡಾ.ಗುರುಲಿಂಗಪ್ಪ, ಹಿಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹ್ಮದ ಶಫಿಯುದ್ದೀನ್, ವಿಜಯಪುರು ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣ ಪಂಚಾಯ್ತಿ ಸಮೂದಾಯ ಸಂಘಟನಾಧಿಕಾರಿ ಹಾಗೂ ಹಿಂದಿನ ಪೌರಾಯುಕ್ತ ರಮೇಶ ನಾಯಕ, ಪ್ರಭಾರಿ ಕಚೇರಿ ವ್ಯವಸ್ಥಾಪಕ ಎಂ.ನಾಗರಾಜ ವಿರುದ್ದ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ನೀಡಿದ ವರದಿ ಆಧರಿಸಿ ತನಿಖೆ ನಡೆಸಲಾಗಿದೆ. ಪೌರಾಡಳಿತ ನಿರ್ದೇಶನಾಲಯದ ಅಧೀಕ್ಷಕ ಅಭಿಯಂತರ ನೇತೃತ್ವದಲ್ಲಿ ಜ.೫ ರಿಂದ ೭ ವರೆಗೆ ತನಿಖೆ ನೀಡಸಿ ನೀಡಿರುವ ವರದಿ ಆಧಾರದ ಮೇಲೆ  ಶಿಸ್ತು ಕ್ರಮಕ್ಕೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಕರ್ತವ್ಯ ಲೋಪದೊಂದಿಗೆ ಆರ್ಥಿಕ ನಷ್ಟಕೆ ಕಾರಣವಾಗಿರುವ ಇಬ್ಬರು ಪೌರಾಯುಕ್ತರನ್ನು ಅಮಾನತ್‌ಗೊಳಿಸಿ ಆದೇಶಿಸಲಾಗಿದೆ.
Megha News