ರಾಯಚೂರು. ಹಾಕಿ ಕ್ರೀಡಾ ಮಾಂತ್ರಿಕ, ಮೇಜ ರ್ ಧ್ಯಾನ್‌ಚಂದ್ ಸಿಂಗ್ ಅವರ ಜನ್ಮದಿನಾ ಗಿದ್ದು, ಈ ದಿನ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹಾಕಿ ಕ್ರಿಡಾಪಟು ಹಾಗೂ ಬಿಜೆಪಿ ಮುಖಂಡ ರವಿಂದ್ರ ಜಲ್ದಾರ್ ಹೇಳಿದರು.
ನಗರದ ಜಿಲ್ಲಾ ಮಹಾತ್ಮ ಗಾಂದಿ ಜಿಲ್ಲಾ ಕ್ರೀಡಾಂ ಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಂಯುಕ್ರ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀ ಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದರು,
ಭಾರತದ ಹಾಕಿ ಪಂದ್ಯದ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆ ಅಂಗ ವಾಗಿ ಕ್ರೀಡಾದಿನ ಆಚರಿಸಲಾಗುತ್ತದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಆಗಸ್ಟ್ 29, 1905ರಲ್ಲಿ ಜನಿಸಿದ ಧ್ಯಾನ್ ಚಂದ್ ಹಾಕಿ ಜಗತ್ತಿನಲ್ಲಿ ಮೆರೆದು ಇತಿಹಾಸ ಸೃಷ್ಟಿಸಿದರು. 1936ರಲ್ಲಿ ಬರ್ಲಿನ್ ನಲ್ಲಿ ನಡೆದ ಒಲಿಂಪಿಕ್ ನಲ್ಲಿ ಚಿನ್ನ ಗೆದ್ದ ಭಾರತ ತಂಡದ ನಾಯಕರಾ ಗಿದ್ದರು.
ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾ ದಿನವನ್ನು 2012ರಲ್ಲಿ ಆಚರಿಸಲಾಯಿತು.
ರಾಯಚೂರಿನ ಹಾಕಿ ತಂಡವು ಬೆಂಗಳೂರಿನಲ್ಲಿ ಆಯ್ಕೆಯಾಗಿ ನಾರ್ಥ ಕರ್ನಾಟಕದಲ್ಲಿ ಆಟವಾ ಡಿದ ಚಾಂಪಿಯನ್ ಶಿಪ್ ಅಯ್ಕೆ ಯಾಗಿದ್ದು ಇತಿಹಾಸವಾಗಿದೆ,
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾ ರ್ಥಿನಿಯರು ಉತ್ತಮವಾಗಿ ಹಾಕಿ ಕ್ರೀಡೆ ಕಲೆಯು ತ್ತಿದ್ದಾರೆ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸಾಧನೆ ಮಾಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ವೀರೇಶ ನಾಯಕ, ತರಬೇತುದಾರ ಹನುಮಂತ, ತಿರುಮಲರೆಡ್ಡಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.