Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsLocal News

ಮಹಡಿಯಿಂದ ಬಿದ್ದು ಗೃಹಿಣಿ ಸಾವು ಕೊಲೆ ಶಂಕೆ

ಮಹಡಿಯಿಂದ ಬಿದ್ದು ಗೃಹಿಣಿ ಸಾವು ಕೊಲೆ ಶಂಕೆ

ರಾಯಚೂರು. ಗೃಹಿಣಿವೊಬ್ಬರು ಮನೆಯ ಮೇಲಿಂದ ಬಿದ್ದ ಅನುಮಾಸ್ಪದವಾಗಿ ಸಾವನ ಪ್ಪಿದ ಘಟನೆ ನಗರದ ಜವಾಹರ ನಗರದಲ್ಲಿ ನಡೆದಿದೆ.

ಮೃತ ಗೃಹಿಣಿ ಶಿಲ್ಪಾ(28) ಎಂದು ತಿಳಿದು ಬಂದಿದೆ. ಶಿಲ್ಪಾ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿತ್ತು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ನೇತಾಜಿ ನಗರ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ರಾತ್ರಿ ಪತಿ ಕೊಲೆ ಮಾಡಿ ಪರಾರಿಯಾಗಿ ದ್ದಾನೆ ಎಂದು ಮೃತ ಗೃಹಿಣಿ ಶಿಲ್ಪಾ ಪೋಷಕರು ಆರೋಪಿಸಿದ್ದಾರೆ‌.
ಮೃತಳ ಪತಿ ಶರತ್, ತಾಯಿ ಶಶಿಕಲಾ ಹಾಗೂ ತಂದೆ ಸುರೇಶ್ ರಿಂದ ಹತ್ಯೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ ರಾತ್ರಿ ಪತಿ ಹಾಗೂ ಪೋಷಕರು ಶಿಲ್ಪಾಳನ್ನ ಕೊಂದು, ಬಳಿಕ ಎರಡನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಆಂದ್ರ ಮೂಲದ ಶಿಲ್ಪಾ ಕುಟುಂಬಸ್ಥರಿಂದ ಆಕ್ರೋಶ ವ್ಯಕ್ತಪಡಿಸಿದ್ದು, ಪರಾರಿಯಾಗಿರುವ ಪತಿ ಶರತ್ ಸ್ಥಳಕ್ಕೆ ಬರೋವರೆಗೂ ಮೃತದೇಹ ತೆಗೆದುಕೊಂಡು ಹೋಗಲು ಬಿಡುವುದಿಲ್ಲವೆಂದು ಮೃತಳ ಪೋಷಕರು ಪಟ್ಟು ಇಡಿದಿದ್ದಾರೆ.
ಈ ಕುರಿತು ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News