ರಾಯಚೂರು. ಎರಡಂತಸ್ಥಿನ ಮಹಡಿಯಿಂದ ಯುವನೋರ್ವ ಅನುಮಾನಸ್ಪದವಾಗಿ ಸಾವನಪ್ಪಿರುವ ಘಟನೆ ನಗರದ ತಿಮ್ಮಾಪೂರ ಪೇಟೆ ಬಡಾವಣೆಯಲ್ಲಿ ನಡೆದಿದೆ.
ಮೃತಪಟ್ಟ ಯುವಕ ರಮೇಶ (19) ಎಂದು ತಿಳಿದು ಬಂದಿದೆ.
ನಿರ್ಮಾಣ ಹಂತದ ಕಟ್ಟಡದ ಎರಡನೇ ಅಂತಸ್ತಿನ ಮೇಲಿಂದ ಕೆಳಗಡೆ ಇರುವ ಟೀನ್ ಶೆಡ್ ಮೇಲೆ ಬಿದ್ದು ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ ಬಡಾವಣೆಯಲ್ಲಿ ಗಣೇಶ ಮೂರ್ತಿ ಬಳಿ ಸ್ನೇಹಿತರೊಂದಿಗೆ ಇದ್ದ, ನಂತರ ಎರಡು ಅಂತಸ್ತಿನ ನಿರ್ಮಾಣದ ಕಟ್ಟಡ ಮೇಲೆ ಮಲಗಿಕೊಂಡಿದ್ದರು, ಬೆಳಗಿನ ಜಾವ ನೋಡಿದಾಗ ರಮೇಶ ಕೆಳಗಡೆ ಟೀನ್ ಶೆಡ್ ಮೇಲೆ ಅನುಮಾನಸ್ಪದವಾಗಿ ಸಾವನಪ್ಪಿದ್ದು ಕಂಡು ಬಂದಿದೆ.
ಸ್ಥಳಕ್ಕೆ ನೇತಾಜಿ ನಗರ ಪೋಲಿಸ್ ಠಾಣೆಯ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದರು.
ಮೃತ ರಮೇಶ ಕುಟುಂಬಸ್ಥರು ಕೊಲೆ ಆಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.