ರಾಯಚೂರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗುಡಿಸಲಿಗೆ ಬೆಂಕಿ ತಗುಲಿ ಸಂಪೂರ್ಣ ವಾಗಿ ಭಸ್ಮವಾಗಿರುವ ಘಟನೆ ತಾಲೂಕಿನ ಕುರ್ವಕುಂದಾ ಗ್ರಾಮದಲ್ಲಿ ನಡೆದಿದೆ.
ಕುರ್ವಕುಂದಾ ಗ್ರಾಮದ ನರಸಿಂಹಲು ಎನ್ನುವವ ರಿಗೆ ಸೇರಿದ ಗುಡಿಸಲು ಎಂದು ತಿಳಿದು ಬಂದಿದೆ.
ನರಸಿಂಹಲು ಅವರ ಪತ್ನಿ ಲಕ್ಷ್ಮಿ, ಮಕ್ಕಳು ಕುರಿ ಕಾಯಲು ಹೋದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗುಡಿಸಲಿಗೆ ಬೆಂಕಿ ಹತ್ತಿಕೊಂಡಿದ್ದು ಮನೆಯಲ್ಲಿ ಯಾರೂ ಇಲ್ಲದೆ ಇರುವುದರಿಂದ ಪ್ರಾಣಹಾನಿ ಸಂಭವಿ ಸಿಲ್ಲ.
ಮನೆಯಲ್ಲಿರುವ ಸುಮಾರು 62 ಸಾವಿರ ನಗದು, ಚಿನ್ನಾಭರಣ ಹಾಗೂ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳ ಸಂಪೂರ್ಣವಾಗಿ ಭಸ್ಮವಾಗಿವೆ.