ಮಸ್ಕಿ.ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಅಕ್ಷತಾ ಗಂಗಾಧರ (16) ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲ್ಲೂ ಕಿನ ಅಮೀನಗಡ ಗ್ರಾಮದ ಆರ್ಎಂಎಸ್ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ.
ಚಿಲ್ಕರಾಗಿ ಗ್ರಾಮದ ಅಕ್ಷತಾ ಬ್ಲೇಡ್ ಹಾಗೂ ಗಾಜಿನ ಬಳೆ ಬಳಸಿಕೊಂಡು ಕೈ ಮತ್ತು ಕತ್ತಿನ ಕೆಳಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ದ್ದಾರೆ ಎಂದು ತಿಳಿದು ಬಂದಿದೆ. ಅಕ್ಷತಾ ಆತ್ಮ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ವಸತಿ ನಿಲಯಗಳಲ್ಲಿ ಬಾಲಕಿ ಚೀರಾಡಿ ಕೊಂಡಾಗ ಗಮನಿಸಿದ ವಿದ್ಯಾರ್ಥಿಗಳು ಅಡುಗೆ ಸಹಾಯಕರಿಗೆ ಮಾಹಿತಿ ತಿಳಿಸಿದ ತಕ್ಷಣವೇ ಆಂಬುಲೆನ್ಸ್ಗೆ ಕರೆ ಮಾಡಿ ಕವಿತಾಳದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕವಿತಾಳ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.