Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಭಗತ್ ಸಿಂಗ್ ಅವರ 117ನೇ ಜನ್ಮದಿನ ನಿಮಿತ್ತ ಪಂಜಿನ ಮೆರವಣಿಗೆ

ಭಗತ್ ಸಿಂಗ್ ಅವರ 117ನೇ ಜನ್ಮದಿನ ನಿಮಿತ್ತ ಪಂಜಿನ ಮೆರವಣಿಗೆ

ರಾಯಚೂರು. ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ 117ನೇ ಜನ್ಮದಿನದ ಅಂಗವಾಗಿ ತಾಲೂಕಿನ ಮನ್ಸಲಾಪುರ ಗ್ರಾಮದಲ್ಲಿ ಎಐಡಿವೈಒ ವತಿಯಿಂದ ಪಂಜಿನ ಮೆರವಣಿ ನಡೆಸಲಾಯಿತು.

ಗ್ರಾಮದ ವಾಲ್ಮೀಕಿ ವೃತ್ತದಿಂದ ಗ್ರಾಮ ಪಂಚಾಯತ್ ಕಚೇರಿ ವರೆಗೆ ಭಗತ್ ಸಿಂಗ್ ಭಾವಚಿತ್ರ ಸಹಿತ ಪಂಜಿನ ಮೆರವಣಿಗೆ ನಡೆಸಿ ಘೋಷಣೆ ಹಾಕಿದರು.
ಈ ವೇಳೆ ಎಐಡಿವೈಓ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿದ ಅವರು, ಭಗತ್ ಸಿಂಗ್ ಅವರ ಜೀವನ ಮತ್ತು ಹೋರಾಟದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು, ಭಗತ್‌‌ ಸಿಂಗ್‌‌ ಅವರ ಮಾರ್ಗದರ್ಶನದಲ್ಲಿ ನಡೆಯ ಬೇಕೆಂದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯ ಯಲ್ಲಪ್ಪ, ಮೌನೇಶ್, ಗ್ರಾಮದ ಯುವಕರಾದ ಕೃಷ್ಣ ನಾಯಕ, ಜಲಾಲ ರೆಡ್ಡಿ, ಸಂತೋಷ, ಆಂಜನೇಯ, ಮಂಜುನಾಥ, ಶಿವಪುತ್ರ, ಶಿವಕುಮಾರ, ಶಿವರಾಜ ಸೇರಿ ಗ್ರಾಮದ ಅನೇಕ ಯುವಕರು, ಮಕ್ಕಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Megha News