Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಅತಿಥಿ ಉಪನ್ಯಾಸಕ ಶಿವುಪುತ್ರಪ್ಪ ಆತ್ಮಹತ್ಯೆ

ಅತಿಥಿ ಉಪನ್ಯಾಸಕ ಶಿವುಪುತ್ರಪ್ಪ ಆತ್ಮಹತ್ಯೆ

ಸಿಂಧನೂರು. ಅತಿಥಿ ಉಪನ್ಯಾಸಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ನಗರದ ವಾರ್ಡ್ ನಂ.17ರ ಗಂಗಾನಗರದಲ್ಲಿ ನಡೆದಿದೆ.

ಮೃತ ಅತಿಥಿ ಉಪನ್ಯಾಸಕ ಶಿವಪುತ್ರಪ್ಪ ಗುಂಡಸಾಗರ (47) ಎಂದು ತಿಳಿದು ಬಂದಿದೆ.
ಮೃತ ಅತಿಥಿ ಉಪನ್ಯಾಸರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ.
ಮೃತ ಶಿವಪುತ್ರಪ್ಪ ಕಳೆದ 9 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.ಕಳೆದ
9 ತಿಂಗಳು ಹುಣಸಗಿಯಲ್ಲಿ, 8 ತಿಂಗಳು
ಸಿಂಧನೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ
ಸೇವೆ ಸಲ್ಲಿಸಿದರು.
ಈ ವರ್ಷದಲ್ಲಿ ಆನ್‍ಲೈನ್ ಮೂಲಕ ತೆಕ್ಕಲ ಕೋಟೆ ಸರ್ಕಾರಿ ಕಾಲೇಜಿಗೆ  ನೇಮಕಗೊಂಡಿದ್ದು ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು ಇಲ್ಲಿ ಯವರೆಗೆ ವೇತನ ನೀಡಿಲ್ಲವೆಂದು ತಿಳಿದು ಬಂದಿದೆ. ನೊಂದು ಆತ್ಮಹತ್ಯೆ ಮಾಡಿಕೊಂ ಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕಾಗ ಮಿಸಿ ಮೃತ ದೇಹವನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಸಾಗಿಸಲಾಯಿತು.
ಈ ಕುರಿತು ಸಿಂಧನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News