ರಾಯಚೂರು. ಜಿಲ್ಲೆಯಲ್ಲಿ ಎರಡು ಕಡೆ ಅಕ್ರಮವಾಗಿ, ಪರವಾನಿಗೆ ಇಲ್ಲದೇ ಪಟಾಕಿಗಳ ದಾಸ್ತುನು ಮಾಡಿದ ಮಾಹಿತಿ ಮೆರೆಗೆ ದಾಳಿ ನಡೆಸಿ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದ್ದಾರೆ.
ಸಿಂಧನೂರು ತಾಲೂಕಿನ ಗುಂಜಳ್ಳಿ ಕ್ಯಾಂಪಿನ ಸತ್ಯನಾರಾಯಣ ಶೆಟ್ಟಿ ಇವರ ಮನೆಯನ್ನು ನಾಗರಾಜ್ ಕೆ. ಎಂಬಾತನು ಬಾಡಿಗೆ ಪಡೆದು ಕೊಂಡು, ಅನಧೀಕೃತವಾಗಿ ಯಾವುದೇ ಪರ ವಾನಿಗೆ ಇಲ್ಲದೇ ಪಟಾಕಿಗಳನ್ನು ದಾಸ್ತಾನು ಮಾಡಿರುವ ಮಾಹಿತಿ ಮೇರೆಗೆ ತುರುವಿಹಾಳ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿ
ಕಲಂ 286, 336 ಐಪಿಸಿ ಮತ್ತು 9(ಬಿ) ಸ್ಫೋಟಕ ಕಾಯ್ದೆ 1884 ರ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ಕ್ರಮ ಕೈಗೊಳ್ಳಲಾಗಿದೆ.
ಸಿಂಧನೂರು ಸಿಪಿಐ, ಸಿಂಧನೂರು ಗ್ರಾಮೀಣ ವೃತ್ತ ಪಿಎಸ್ಐ ತುರ್ವಿಹಾಳ ಸಿಬ್ಬಂದಿಯವರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗ ಳೊಂದಿಗೆ ದಾಳಿ ಮಾಡಿ, ಪಾಟಾಕಿಗಳನ್ನು ದಾಸ್ತಾನು ಮಾಡಿದ ನಾಗರಾಜ್ ಕೆ. ಈತನನ್ನು ವಶಕ್ಕೆ ಪಡೆದು ಆತನು ದಾಸ್ತಾನು ಮಾಡಿದ 1,141 ಕೆ.ಜಿ. 670 ಗ್ರಾಂಗಳು ತೂಕದ ಒಟ್ಟು 24,40,043 ರೂ ಬೆಲೆ ಬಾಳುವ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಯಚೂರು ನಗರದ ಬ್ರೇಸ್ತವಾರ ಪೇಟೆ ಏರಿಯಾದಲ್ಲಿರುವ ಗೀತಾ ಮಂದಿರ ಹತ್ತಿರದ ಮನೆಯಲ್ಲಿ ಪಿ. ರಮೇಶ ತಂದೆ ಪಿ.ಜೇಬಣ್ಣ ಇವತು ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದರ ಕುರಿತು ಮಾಹಿತಿ ಮೇರೆಗೆ ಸದರ್ ಬಜಾರ್ ಪೊಲೀಸ್ ಠಾಣೆಯ ಪೋಲಿಸರು ದಾಳಿ ನಡೆಸಿ ಕಲಂ 286, 336 ಐ.ಪಿ.ಸಿ. ಮತ್ತು 9(ಬಿ) ಸ್ಫೋಟಕ ಕಾಯ್ದೆ 1884 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.
ಪಿ. ರಮೇಶ ತಂದೆ ಪಿ.ಜೇಬಣ್ಣ ಇವರನ್ನು ವಶಕ್ಕೆ ಪಡೆದು, ಅಕ್ರಮವಾಗಿ ದಾಸ್ತಾನು ಮಾಡಿದ 30 ಕೆಜಿ 50,000 ಬೆಲೆ ಬಾಳುವ ವಿವಿಧ ಬಗೆಯ ಪಟಾಕಿಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ಈ ಕುರಿತು ಸದರ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರು
ಈ ಪ್ರಕರಣಗಳ ಮೂಲವನ್ನು ಪತ್ತೆ ಹಚ್ಚಿ ತನಿಖೆ ಕೈಗೊಳ್ಳಲು ಸೂಚಿಸಿದ್ದಾರೆ.
ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದಾರೆ.