ರಾಯಚೂರು.ನೀರಾವರಿ ಅಧಿಕಾರಿಗಳಿಗೆ ಗ್ರಾ ಮೀಣ ಶಾಸಕ ದದ್ದಲ್ ಬಸನಗೌಡ ಬಾಯಿಗೆ ಬಂದಂತೆ ಅವಾಶ್ಯ ಶಬ್ದಗಳಿಂದ ನಿಂಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
ತುಂಗಭದ್ರಾ ಎಡದಂಡೆ ಕಾಲುವೆ ಸಿರವಾರ ವಿಭಾಗ ಇಇ ಸತ್ಯನಾರಾಯಣ ಶೆಟ್ಟಿ ಹಾಗೂ ಎಇಇ ವಿಜಯಲಕ್ಷ್ಮಿ ಪಾಟೀಲ್ ಮೇಲೆ ಶಾಸಕ ದದ್ದಲ್ ಗರಂ ಆಗಿ ಮಾತನಾಡಿದ್ದಾರೆ.
ಮಾತನಾಡುವಾಗ ಅಸಂಬದ್ಧ ಪದ ತಿಕ್ಕ ಸೂ… ಮಗನೆ ಎಂದು ಪದ ಬಳಕೆ ಮಾಡಿದ್ದಾರೆ.
ನಿಮಗೆ ರೈತರ ಕೈಯಿಂದ ಚಪ್ಪಲಿಯಿಂದ ಹೊಡೆ ಸುತ್ತೇನೆ ಎಂದಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆ ಅಧಿಕಾರಿಗಳಿಗೆ ಕೆಟ್ಟ ಪದ ಬಳಸಿ ವಾಗ್ದಾಳಿ ನಡೆಸಿ, 7 ಕಡೆ ಡಿಸ್ಟ್ರಿ ಬೂಟರ್ ಗೇಟ್ ಮುರಿದಿದೆ, ರೈತರಿಗೆ ನೀರು ತಲುಪಿಲ್ಲ, ಹಾಗೂ ಕಾಲುವೆ ನಿರ್ವಹಣೆ ಗೇಟ್ ಮುರಿದಿದೆ, ದುರಸ್ಥಿ ಮಾಡಿಲ್ಲ ಎಂದು ಗರಂ ಆಗಿದ್ದಾರೆ.
ತುಂಗಭದ್ರಾ ಎಡದಂಡೆ ಕೊನೆ ಭಾಗದ ರೈತರಿಗೆ ನೀರು ತಲುಪದೇ ಇವುದರಿಂದ ಪ್ರತಿಭಟನೆ ಮಾಡುತ್ತಿದ್ದಾರೆ, ನೀರು ತಲುಪದ ಹಿನ್ನೆಲೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.