ರಾಯಚೂರು. ಕಾಲುವೆಗೆ ನೀರು ಹರಿಸಲಾಗಿದ್ದು, ಜೊತೆಗೆ ಮಳೆಯಾಗಿದ್ದರಿಂದ ಹಳ್ಳ ಭರ್ತಿಯಾಗಿ ಹರಿದು ಸಂಚಾರಕ್ಕೆ ತೊಂದರೆ ಉಂಟಾಗಿದ್ದು ವಿದ್ಯಾರ್ಥಿಗಳು ಗ್ರಾಮಸ್ಥರು, ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ಲಿಂಗಸುಗೂರು ತಾಲೂಕಿನ ಜಾಗೀರ ನಂದಿಹಾಳ ಗ್ರಾಮದ ವ್ಯಾಪ್ತಿಯಲ್ಲಿ ರಾಂಪುರ ಏತ ನೀರಾವರಿ ಯೋಜನೆ ಕಾಲುವೆಯ ಹೆಚ್ಚುವರಿ ನೀರು ಹಳ್ಳಕ್ಕೆ ನೀರು ಹರಿದಿದ್ದು, ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಹಳ್ಳ ಭರ್ತಿಯಾಗಿ ಹರಿದಿದೆ. ಇದರಿಂದ ಸಂಚಾರ ಬಂದ್ ಆಗಿದ್ದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೊಂದರೆಗೆ ಸಿಲುಕಿದ್ದಾರೆ.
ಜಾಗಿರ್ ನಂದಿಹಾಳ ಹಾಗೂ ಆನೆ ಹೊಸೂರು ನಡುವೆ ಹಳ್ಳಿವಿದ್ದು, ಸೇತುವೆ ಚಿಕ್ಕದಾಗಿರುವುದ ರಿಂದ ಅಲ್ಪ ನೀರು ಬಂದರೂ ಸೇತುವೆ ಮುಳು ಗಡೆಯಾಗುತ್ತದೆ, ಗ್ರಾಮಸ್ಥರು ನೀರಿನಲ್ಲಿಯೇ ಬೈಕ್ ಹಾಗೂ ನಡೆದುಕೊಂಡು ಹೋಗುವ ಪರಸ್ಥಿತಿ ನಿರ್ಮಾಣವಾಗಿದೆ.
ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಹಳ್ಳ ದಾಟಲು ಸಾಕಷ್ಟು ತೊಂದರೆ ಅನುಭವಿ ಸುವಂತಾಗಿದೆ. ಕೂಡಲೇ ಸೇತುವೆಯನ್ನು ಪುನರ್ ನಿರ್ಮಾಣ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.