ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಅಕ್ರಮವಾಗಿ ಬೋರ್‌ವೆಲ್ ಕೊರೆಯುವುದನ್ನು ತಡೆಯಲು ಹಿರಿಯ ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕರ್ನಾಟಕ ಸಣ್ಣ ನೀರಾವರಿ ಸಚಿವ ಎನ್‌ಎಸ್ ಬೋಸರಾಜು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಅಂತರ್ಜಲ ಕುಸಿತ ತಡೆಯಲು ಈ ಕ್ರಮ ಅಗತ್ಯವಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಬೋರ್‌ವೆಲ್ ಕೊರೆಯಲು ಅನುಮತಿ ಸಿಗುವುದು ವಿಳಂಬವಾಗುತ್ತಿದೆ ಎಂಬುದು ನಿಜ. ಆದರೆ, ಅಕ್ರಮವಾಗಿ ಬೋರೆವೆಲ್ ಕೊರೆಯುವ ಬಗ್ಗೆ ದೂರುಗಳು ಬಂದಿರುವುದರಿಂದ ಇದನ್ನು ನಿಲ್ಲಿಸಬೇಕು. ಈ ಬಗ್ಗೆ ಪರಿಶೀಲಿಸುವಂತೆ ಅಂತರ್ಜಲ ನಿರ್ದೇಶನಾಲಯಕ್ಕೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಹಠಾತ್ ದಾಳಿಯಲ್ಲಿ ಬೋರ್‌ವೆಲ್‌ಗಳ ತಪಾಸಣೆ ನಡೆಸಲು ವಿಶೇಷ ತಂಡಕ್ಕೆ ತಿಳಿಸಲಾಗಿದೆ. ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಇಂಜಿನಿಯರ್ ಗೆ ಅವರು ಸೂಚಿಸಿದ್ದಾರೆ. ಸಚಿವರ ನಿರ್ದೇಶನದಂತೆ ಅಂತರ್ಜಲ ನಿರ್ದೇಶನಾಲಯದ ಉಪನಿರ್ದೇಶಕ ಜಿ.ಜಯಣ್ಣ ಹಾಗೂ ಹಿರಿಯ ಭೂವಿಜ್ಞಾನಿ ಎಚ್.ಎಂ.ನಾಗರಾಜ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು
Megha News > State News > ಬೆಂಗಳೂರು ನಗರ ಜಿಲ್ಲೆಯಲ್ಲಿ ಅಕ್ರಮ ಬೋರ್‌ವೆಲ್ ಗಳ ತಡೆಗೆ ವಿಶೇಷ ತಂಡ ರಚನೆ: ಸಚಿವ ಎನ್‌ಎಸ್ ಬೋಸರಾಜು
ಬೆಂಗಳೂರು ನಗರ ಜಿಲ್ಲೆಯಲ್ಲಿ ಅಕ್ರಮ ಬೋರ್‌ವೆಲ್ ಗಳ ತಡೆಗೆ ವಿಶೇಷ ತಂಡ ರಚನೆ: ಸಚಿವ ಎನ್‌ಎಸ್ ಬೋಸರಾಜು
Tayappa - Raichur09/11/2023
posted on
Leave a reply