ರಾಯಚೂರು. ಗಿಡ ಮೂಲಿಕೆಯಿಂದ ಔಷಧಿ ಅಯುರ್ವೇದದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು, ಇದರಿಂದ ಸಾಕಷ್ಟು ಅನುಕೂಲಗಳಿಗೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಹೇಳಿದರು.
ನಗರದ ಆರೋಗ್ಯ ಇಲಾಖೆ ಸಭಾಂಗಣದಲ್ಲಿ
ಜಿಲ್ಲಾ ಅಯುಷ್ ಇಲಾಖೆ ಬೆಂಗಳೂರು, ಅಯುಷ್ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಅಯುಷ್ ಇಲಾಖೆ ಧನ್ವಂತರಿ ಜಯಂತಿ ಅಂಗವಾಗಿ 8ನೇ ರಾಷ್ಟ್ರೀ ಯ ಅಯುರ್ವೇದ ದಿನಾಚಾರಣೆ ಕಾರ್ಯಕ್ರ ಮದಲ್ಲಿ ಉದ್ಘಾಟಿಸಿ ಮಾತನಾಡಿದರು,
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಆಯುರ್ವೇದಿಕ ದಿಂದ ಸಾಕಷ್ಟು ರೋಗಗಳು ಗುಣಮುಖರಾ ಗುತ್ತಿದೆ ಹೆಚ್ಚಿನ ಅಧ್ಯತೆ ನೀಡಬೇಕಾಗಿದೆ, ಗಿಡ ಮೂಲಕೆಗಳಿಗೆ ಮಾಡುವ ಔಷಧಿಗಳಿಂದ ಗುಣಮುಖರಾಗುತ್ತಿದ್ದಾರೆ, ಇದಕ್ಕೆ ಮಹತ್ವ ನೀಡಬೇಕಿದೆ ಎಂದರು.
ತಮ್ಮ ಮನೆ ಮುಂದಿನ ಅಂಗಳದಲ್ಲಿ ಗಿಡ ಮೂಲಕೆ ಗಿಡಗಳನ್ನು ಬೆಳೆಸಬೇಕು, ಇದರಿಂದ ಉತ್ತಮ ಆರೋಗ್ಯದಿಂದ ಇರಲು ಸಾಧ್ಯ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಬೇಕಿದೆ,
ಆಧುನಿಕತೆ ಬೆಳೆದಂತೆಲ್ಲಾ ಎಲ್ಲವೂ ಬದಲಾವಣೆ ಯಾಗುತ್ತಿದೆ, ಆದರೆ ನಾವು ಹಿಂದಿನ ಕಾಲಕ್ಕೆ ಹೋಗುವ ಪರಸ್ಥಿತಿ ನಿರ್ಮಾಣವಾಗಿದೆ, ಗಿಡ ಮೂಲಿಕೆಗಳಿಂದ ಮಾಡುವ ಔಷಧಿ ಪಡೆಯುವು ದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಕಾರಿ ಸುರೇಂದ್ರ ಬಾಬು,ಜಿಲ್ಲಾ ಅಯುಷ್ ಅಧಿಕಾರಿ ಶಂಕರಗೌಡ ಐ.ಪಾಟೀಲ್. ಡಾ.ಅಂಜಾದ್, ಡಾ.ವೆಂಕಟೇಶ ದೇಸಾಯಿ, ಡಾ.ಶಕೀಲ್, ಶಂಕರ ನಾರಾಯಣ, ಯಂ.ಎ ಮತ್ತು ಕುಟುಂಬ ಕಲ್ಯಾಣ ಇಲಾಯ. ಅಸ್ಲಾಂ ಸೇರಿದಂತೆ ಅನೇಕರ ಭಾಗವಹಿಸಿದರು.