Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಲ್ಯಾಬ್ ಟೆಕ್ನಿಷಿಯನ್ ಕೊಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ ಚಿನ್ನಾಭರಣ ವಶ

ಲ್ಯಾಬ್ ಟೆಕ್ನಿಷಿಯನ್ ಕೊಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ ಚಿನ್ನಾಭರಣ ವಶ

ರಾಯಚೂರು. ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿನ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯ ನ್ ಆಗಿದ್ದ ಮಂಜುಳಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇಬ್ಬರು ಆರೋ ಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 7.49 ಲಕ್ಷ ನಗದು, 163.35 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿ ದ್ದಾರೆ‌.
ಅ.26 ರಂದು ಹಟ್ಟಿ ಕ್ಯಾಂಪಿನ ಗುಂಡುರಾವ್ ಕಾಲೋನಿ ಬ್ಲಾಕ್ ನಂ.4 ರಲ್ಲಿ ಲ್ಯಾಬ್ ಟೆಕ್ನಿಷಿ ಯನ್ ಮಂಜುಳಾ ಮೃತದೇಹ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಸಹೋದರ ದೂರಿ ನನ್ವಯ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು, ನಂತರ ಮಂಜುಳಾ ಪುತ್ರ ಸಚಿನ ಪಾಲ್ ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದರು,
ಮಂಜುಳಾ ಬ್ಯಾಂಕಿನಲ್ಲಿ ಸಾಲಪಡೆದ 10 ಲಕ್ಷ ರೂ ಹಣವನ್ನು ಡ್ರಾ ಮಾಡಿಕೊಂಡು ಮನೆಯಲ್ಲಿ ಇಟ್ಟಿದ್ದರು, ಮನೆಯಲ್ಲಿ ಚಿನ್ನಾಭರಣಗಳು ಸಹ ಇದ್ದವು ಎಂದು ತಿಳಿಸಿದ್ದ ಅ.26 ರಂದು ಬೆಳಗಿನ ಜಾವ ಮನೆ ಹತ್ತಿರದ ಟೀನ್‌ಶೆಡ್ ಬಳಿ ದುಷ್ಕರ್ಮಿಗಳು ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ದೂರು ನೀಡಿದ್ದರು.
ಪೋಲಿಸ್ ದೂರು ಪಡೆದು ತಂಡ ರಚನೆ ಮಾಡಿ ತನಿಖೆ ಆರಂಭಿಸಿದ್ದರು, ಆರೋಪಿ ಹಟ್ಟಿ ಕ್ಯಾಂಪಿನ ಸಮೀರ್ ಸೋಹೆಲ್(23) ಮಹಮ್ಮದ್ ಕೈಫ್(23) ಬಂಧಿಸಿದ್ದು ಬಂದಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

Megha News