ರಾಯಚೂರು. ಜನ-ಜಾನುವಾರುಗಳಿಗೆ ಕುಡಿ ಯುವ ನೀರಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕುಡಿ ಯುವ ನೀರು ಪೂರೈಕೆಗೆ ಸಂಬಂಧಿಸಿದ ಕಾಮ ಗಾರಿಗಳು ವಿಳಂಬವಾಗದಂತೆ ನಡೆಯಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ
ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟೀಲ್ ಅವರು ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು.
ಮಸ್ಕಿ ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಮಸ್ಕಿ ವಿಧಾನಸಭಾ ಕ್ಷೇತ್ರದ ಬರಪೀಡಿತ ಪ್ರದೇಶಕ್ಕೆ ಭೇಟಿ ಹಿನ್ನೆಲೆಯಲ್ಲಿ ಸಚಿವರು ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್ ಬಸನಗೌಡ ತುರ್ವಿಹಾಳ ಅವರೊಂದಿಗೆ ಮೊದಲಿಗೆ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮಕ್ಕೆ ತೆರಳಿ ಆ ಗ್ರಾಮದ ರೈತರಾದ ಮುದುಕಪ್ಪ ತಂದಿ ಮಲ್ಲಪ ಹಾಗೂ ಶಿವಪ್ಪ ತಂದೆ ಅಮರಪ್ಪ ಅವರ ಜಮೀನಿನಲ್ಲಿ ಬೆಳೆದ ಹತ್ತಿ ಮತ್ತು ತೊಗರಿಬೆಳೆಯ ವೀಕ್ಷಣೆ ನಡೆಸಿದರು. ಬಳಿಕ ಹಾಲಾಪುರ ಹೋಬಳಿಯ ತೋರಣದಿನ್ನಿ ಪಂಚಾಯಿತಿ ವ್ಯಾಪ್ತಿಯ ಚಿಕ್ಕದಿನ್ನಿಯಲ್ಲಿ ರಾಜೇಶ್ವರಿ ಗಂಡ ಅಮರೇಗೌಡ ಮತ್ತು ಶರಣೇಗೌಡ ತಂದೆ ಈರನಗೌಡ ಅವರ ಜಮೀನಿನಲ್ಲಿನ ಭತ್ತದ ಬೆಳೆಯ ಹಾನಿಯ ವೀಕ್ಷಣೆ ನಡೆಸಿದರು.
ಈ ವೇಳೆ ಮಸ್ಕಿ ತಹಸೀಲ್ದಾರರಾದ ಸುಧಾ ಅರಮನೆ, ತಾಪಂ ಇಓ ಉಮೇಶ ಸೇರಿದಂತೆ ಇತರರು ಇದ್ದರು. ಬಳಿಕ ಸಚಿವರು ಸಿಂಧನೂರ ಮೂಲಕ ಪೋತ್ನಾಳಕ್ಕೆ ಪ್ರಯಾಣಿಸಿ ಅಲ್ಲಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.