ರಾಯಚೂರು. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ( ದಿಶಾ) ಸಭೆಯನ್ನು 12 ಗಂಟೆಗೆ ನಿಗಧಿಪಡಿಸಿದ್ದು 2 ಗಂಟೆಯಾದರೂ ಸಂಸದರು ಬಾರದೇ ಇರುವುದ ರಿಂದ ಅಧಿಕಾರಿಗಳು ಒಂದುವರೆ ಗಂಟೆಗಳ ಕಾಲ ಕಾದು ಸುಸ್ತಾದರು.
ಸಂಸದರು ಹಮ್ಮಿಕೊಂಡ ದಿಶಾ ಸಭೆಯಲು ಪೂರ್ವಭಾವಿಯಾಗಿ ನ.8 ರಂದು ಎಲ್ಲಾ ಅಧಿಕಾರಿಗಳಿಗೆ ಮುಂಚಿತವಾಗಿ ದಿನಾಂಕ ಮತ್ತು ಸಮಯ ನಿಗದಿಪಡಿಸಿ ಸಭೆಯ ಸೂಚನಾ ಪತ್ರವನ್ನು ಕಳುಹಿಸಲಾಗಿತ್ತು.
ಸಭೆಗೆ ಮುನ್ನ 12 ಗಂಟೆಯೊಳಗೆ ಎಲ್ಲಾ ಅಧಿಕಾ ರಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿದರು, ಆದರೆ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಕರಡಿ ಸಂಗಣ್ಣ ಅವರು ನಿಗದಿಪಡಿಸಿದ ಸಮಯಕ್ಕೆ ಬಾರದೇ ಇರುವುದರಿಂದ ಅಧಿಕಾರಿಗಳು ಕಾದು ಸುಸ್ತಾದರು, ಸಭೆಯು 12 ಗಂಟೆಗೆ ನಿಗದಿಪಡಿಸಿದರೂ 2 ಗಂಟೆಯಾದರೂ ಸಭೆ ಮಾಡಿದೇ ಕಂಡು ಬಂತು, 1.30ಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಸಿಇಒ ಅವರು ಆಗಮಿಸಿ ಅವರು ಸಹ ಸಂಸದರ ದಾರಿ ಕಾಯುತ್ತಾ ಕುಳಿತರು.