ರಾಯಚೂರು. ಜಿಲ್ಲೆಯಲ್ಲಿ ಶಿಕ್ಷಕರ ನೇಮಕಾತಿ ಯಾಗಿದ್ದು, ಆದೇಶ ಪತ್ರಕ್ಕಾಗಿ ಭಾವಿ ಶಿಕ್ಷಕರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದೆ ಕಾಯುವ ಪರಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಖಾಲಿಯಿರುವ ಶಿಕ್ಷಕರ ನೇಮಕಾತಿ ಗಾಗಿ ಸರ್ಕಾರವು ನೇಮಕಾತಿಗೊಳಿಸಿ ಆದೇಶ ಹೊರಡಿಸಿದ ನಂತರ ಸಾರ್ವಜನಿಕ ಶಿಕ್ಷ ಣ ಇಲಾಖೆಯಿಂದ ಆದೇಶವನ್ನು ನೀಡಬೇಕಿದೆ, ಆದರೆ, ಇಲಾಖೆಯಲ್ಲಿನ ಕೆಲ ಸಿಬ್ಬಂದಿಗಳಿಂದ ಶಿಕ್ಷಕರ ನೇಮಕಾತಿಯ ಆದೇಶ ಪತ್ರದ ದಾಖಲೆಗ ಳ ಪರಿಶೀಲನೆ ನಡೆದಿದ್ದು, ವಿಳಂಭವಾಗುತ್ತಿದೆ, ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಬಂದ ಅಭ್ಯ ರ್ಥಿಗಳು ಆದೇಶ ಪತ್ರಕ್ಕಾಗಿ ಇಲಾಖೆ ಮುಂದೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಇಲಾಖೆಯಲ್ಲಿ ತಮಗೆ ಬೇಕಿದ್ದ ಅಭ್ಯರ್ಥಿಗಳ ನೇಮಕಾತಿ ದಾಖಲೆಗಳನ್ನು ಸಿದ್ದಪಡಿಸಿ ನೀಡುತ್ತಿದ್ದು, ಇಲಾಖೆಯ ಬೇಜಬ್ದಾರಿ ಎದ್ದು ಕಾಣುತ್ತಿದೆ.
ಶಿಕ್ಷಕರ ನೇಮಕಾತಿ ಸಂಬಂಧಿಸಿದ ಎಲ್ಲಾ ಇಲಾಖೆಗೆ ಸಲ್ಲಿಸಿದ್ದಾರೆ, ಗ್ರಾಮೀಣ, ಕನ್ನಡ ಮಾದ್ಯಮ, 371 ಜೆ, ಸೇರಿದಂತೆ ಸುಮಾರು 16 ದಾಖಲೆಗಿದ್ದು ಬಹುತೇಕ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿದ್ದು, ಅವುಗಳನ್ನು ಪರಿಶೀಲನೆ ಮಾಡಿ ಅಭ್ಯರ್ಥಿಗಳಿಗೆ ನೀಡಬೇಕಿದೆ ಆದರೆ ಇಲಾಖೆಯ ಕೆಲ ಸಿಬ್ಬಂದಿಗಳು ತಮಗೆ ಬೇಕಿರುವವರಿಗೆ ಹಾಗೂ ಹಣ ನೀಡಿದವರಿಗೆ ದಾಖಲೆಗಳನ್ನು ಫೈಲ್ ಮಾಡಿ ಪರಿಶೀಲನೆಗೆ ಕಳುಹಿಸುತ್ತಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಶಿಕ್ಷಕರ ನೇಮಕಾತಿಯ ದಾಖಲೆಗಳ ಫೈಲ್ ಸಿದ್ದಪಡಿಸಲು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ, ಇದರಿಂದ ಹೊರಗಡೆಯಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ದಾಖಲೆಗಳನ್ನು ಫೈಲ್ ಮಾಡುವ ಪರಸ್ಥಿತಿ ಇಲಾಖೆಯದ್ದಾಗಿದೆ.
ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡು ತೆರಳಬೇಕಾದ ಶಾಲೆಯಲ್ಲಿ ಹಾಜರಾಗಿಬೇಕಿದೆ,
ಇತ್ತೀಚೆಗೆ ಅತಿಥಿ ಶಿಕ್ಷಕ ನೇಮಕಾತಿಯಾಗಿದ್ದು ಅದೇ ಶಾಲೆಗೆ ಅಭ್ಯರ್ಥಿಗಳು ತೆರಳುತ್ತಿದ್ದು, ಅಂತಹ ಅಭ್ಯರ್ಥಿಗಳ ಆದೇಶ ಪತ್ರ ನೀಡಲು ವಿಳಂಭ ಮಾಡುತ್ತಿದ್ದಾರೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.
ಪ್ರತಿದಿನ 50 ರಿಂದ 60 ಅಭ್ಯರ್ಥಿಗಳು ಆದೇಶ ಪತ್ರ ನೀಡಲು ದಾಖಲೆಗಳನ್ನು ಪರಿಶೀಲನೆ ಮಾಡಿ ನೀಡಲಾಗುತ್ತಿದೆ, ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಮಾತ್ರ ಆದೇಶ ನೀಡಲಾಗು ಗುತ್ತಿದೆ, ದಾಖಲೆಗಳು ಸಮರ್ಪಕವಾಗಿಲ್ಲದಿದ್ದಲ್ಲಿ ಫೈಲ್ ಪೆಂಡಿಂಗ್ ಇಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಇಂದು ಶಿಕ್ಷಣ ಇಲಾಖೆ ಮುಂಭಾಗದಲ್ಲಿ ಸುಮಾ ರು 50 ರಿಂದ 100ಕ್ಕೂ ಅಧಿಕ ಅಭ್ಯರ್ಥಿಗಳು ಆದೇಶ ಪತ್ರಕ್ಕಾಗಿ ಸಾಲುಗಟ್ಟಿ ನಿಂತಿದ್ದಾರೆ, ಬಂದವರ ದಾಖಲೆಗಳನ್ನು ಪರಿಶೀಲನೆ ಮಾಡದೇ ತಮಗೆ ಬೇಕಾದವರ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಆರಂಭದಲ್ಲೇ ಶಿಕ್ಷಣ ಇಲಾಖೆಯು ಶಿಕ್ಷಕರ ನೇಮಕಾತಿಗೆ ಸಂಭವಿಸಿದಂತೆ ಭಾವಿ ಶಿಕ್ಷಕರಿಗೆ ಸತಾಯಿಸುತ್ತಿದ್ದು, ಭಾವಿ ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಶಿಕ್ಷಣ ಇಲಾಖೆಯು ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ಮಾಡಿ ಆದೇಶ ಪತ್ರ ನೀಡಬೇಕಾಗಿದೆ.