ರಾಯಚೂರು. ಕೃಷಿ ವಿಶ್ವ ವಿದ್ಯಾಲಯವು ಸಂಶೋಧನೆ ಮತ್ತು ಗುಣಮಟ್ಟದ ಶಿಕ್ಷಣದಿಂದ ಬೆಳೆಯಲು ಸಾಧ್ಯವಾಗಿದ್ದು, ಜೊತೆಗೆ ಆ ಸಮ ಯದಲ್ಲಿ ಇದ್ದ ವಿಜ್ಞಾನಗಳ ಯಶಸ್ಸುನಿಂದ ವಿಶ್ವ ವಿದ್ಯಾಲಯದ ಬೆಳೆಯಲಿಕ್ಕೆ ಕಾರವಾಗಿದೆ ಎಂದು ನಿಫ್‌ಟೆಮ್ ( ಹರಿಯಾಣ) ಹಾಗೂ ತೋಟಗಾರಿಕೆ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸಿ.ವಾಸುದೇವಪ್ಪ ಹೇಳಿದರು.
ನಗರದ ಕೃಷಿ ವಿಶ್ವ ವಿದ್ಯಾಲಯದ ಪ್ರೇಕ್ಷಾ ಗೃಹದಲ್ಲಿ 15ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,
ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಈ ಹಿಂದೆ ಧಾರವಾಡ ವಿಶ್ವ ವಿದ್ಯಾಲಯಕ್ಕೆ ಒಳಪಟ್ಟಿತು, ಅಂದಿನ ಸಂದರ್ಭದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸಾಕಷ್ಟು ಸಂಶೋಧನೆ ಮಾಡಿದೆ, ಜೊತೆಗೆ ಗುಣಮಟ್ಟದ ಶಿಕ್ಷಣ ಒದಗಿಸಿತ್ತು, ಈ 2005 ರಲ್ಲಿ ಧಾರವಾಡ ವಿಶ್ವ ವಿದ್ಯಾಲಯದಿಂದ ಬೇರ್ಪಟ್ಟು ಪ್ರತೇಕ ವಿಶ್ವ ವಿದ್ಯಾಲಯವಾಯಿತು ಎಂದರು.
ರಾಯಚೂರು ಕೃಷಿ ವಿಶ್ವ ವಿದ್ಯಾಲಯ ಬೌಗೋ ಳಿಕ ಪ್ರದೇಶದಲ್ಲಿದ್ದು, ಹೆಚ್ಚು ಎತ್ತರಕ್ಕೆ ಬೆಳೆಯಲು ಸಾಕಷ್ಟು ಶ್ರಮಿಸಿದ್ದಾರೆ, ಮತ್ತಷ್ಟು ಎತ್ತರಕ್ಕೆ ಬೆಳೆಸಬೇಕು, ಆರಂಭದಲ್ಲಿ 4 ಕೃಷಿ ಕಾಲೇಜುಗಳು ಇದ್ದು, 400 ರಿಂದ 500 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೂ ಇಂದು ಸಾಕಷ್ಟು ಬೆಳೆವಣಿಗೆಯಾಗಿದೆ, ಕೃಷಿ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಸಂಶೋಧನೆ ನಡೆಸಿ ದೇಶದಲ್ಲಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.
ಸಾಕಷ್ಟು ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡಿದ ಅನೇಕ ಕ್ಷೇತ್ರದಲ್ಲಿ ಬೆಳೆಯಲು ಬುನಾದಿ ಹಾಕಿಕೊಟ್ಟಿದೆ, ಅದರಲ್ಲಿ ವಿಜಯ ನಗರ ಜಿಲ್ಲಾಧಿಕಾರಿ ದಿವಾರಕ ಒಬ್ಬರಾಗಿದ್ದಾರೆ,
ಈ ಭಾಗದ ಸಂಶೋಧನೆ ಮುಖ್ಯವಾಗಿ ಮೂರು ಬೆಳೆಗಳು ಮಾಡಿದೆ, ಹತ್ತಿ, ಭತ್ತ ಮತ್ತು ತೊಗರಿ ತಳಿ ಸಂಶೋಧನೆ ಮಾಡಿದೆ ಎಂದರು.
ಸಂಶೋಧನೆಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಲಭಿಸಿದೆ, ದೇಶದ 25 ವರ್ಷಗಳ ಹಳೆದ ವಿಶ್ವ ವಿದ್ಯಾಲಯಗಳಲ್ಲಿ ಅತಿ ಚಿಕ್ಕ ಕೃಷಿ ವಿಶ್ವ ವಿದ್ಯಾಲಯದ ಜೊತೆಗೆ ವೇಗವಾಗಿ ಬೆಳೆದು ಹೊರ ಹೊಮ್ಮಿದೆ, ಈ ಭಾಗದಲ್ಲಿ ತಳಿಗಳು ಸಂಶೋಧನಾ ಮಾಡಿದೆ, ಐಸಿಎಆರ್ ಅವಾರ್ಡ್ ಪಡೆದುಕೊಂಡಿದೆ ಎಂದು ತಿಳಿಸಿದರು.
ವಿಜಯನಗರ ಜಿಲ್ಲಾಧಿಕಾರಿ ಎಮ್ ಎಸ್ ದಿವಾಕರ ಮಾತನಾಡಿ ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಕಳಿತಿದ್ದು, ಇಲ್ಲಿನ ಅದ್ಯಾಪಕರ ಪ್ರೋತ್ಸಾಹದಿಂದ ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿಯಾಗಿ , ಜಂಟಿ ಕೃಷಿ ಅಧಿಕಾರಿಯಾಗಿದ್ದ ಕೆಲಸ ಮಾಡಿದ್ದು, ಇದೀಗ ಐಎಎಸ್ ಮುಗಿಸಿ ಜಿಲ್ಲಾಧಿಕಾರಿಯಾ ಗಿದ್ದೆನೆ ಇದಕ್ಕೆ ಮುಖ್ಯ ಕಾರಣ ಪರಿಶ್ರಮ ಯಾವುದೇ ಅಡೆಗಡೆಗಳಿದ್ದರೂ ಅದನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟರೆ ಯಶಸ್ವು ನಮ್ಮನ್ನು ಹುಡಿಕೊಂಡು ಬರುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಸಂಶೋದನೆ ಮಾಡಿ ಐಎಎಸ್ ಆಗಲು ಹೆಚ್ಚು ಅಭ್ಯಾಸ ಮಾಡಿ, ಎಂದ ಅವರು ವಿಶ್ವ ವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ ಹಳೆಯ ನೆನಪುಗಳನ್ನು ನೆನೆಪಿಸಿಕೊಂಡರು.
ಈ ಸಂದರ್ಭದಲ್ಲಿ ಕುಲಪತಿ ಡಾ.ಎಂ ಹನುಮಂತಪ್ಪ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ವಿಶ್ರಾಂತ ಕುಲಪತಿ ಬಿವಿ ಪಾಟೀಲ್, ಎಸ್‌ಕೆ ಮೇಟಿ, ಮಲ್ಲಿಕಾರ್ಜುನ ಡಿ, ತ್ರಿವಿಕ್ರಮ ಜೋಷಿ, ಕೊಟ್ರೇಶಪ್ಪ ಕೊರಿ, ಶ್ರೀಧರ ಕೆಸರಟ್ಟಿ, ಸುನಿಲ್, ನೇಮಿಚಂದ್ರಪ್ಪ, ವಿಶ್ವನಾಥ, ಗೌಡಪ್ಪ ಸೇರಿದಂತೆ, ಪ್ರಾದ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.