ರಾಯಚೂರು. ಭಾರತೀಯ ವಿಶ್ವವಿದ್ಯಾಲಯ ಗಳ ಫೆಡರೇಶನ್, ಅಂತರರಾಷ್ಟ್ರೀಯ ವಿಜ್ಞಾನ ಮತ್ತು ಸಂಶೋಧನೆ ಅಕಾಡಮಿ ಕೋಲ್ಕತ್ತಾ ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರಿ ನಲ್ಲಿ ಇಂದಿನಿಂದ 25ರವರೆಗೆ ನಡೆಯುತ್ತಿರುವ 2ನೇ ಅಂತರರಾಷ್ಟ್ರೀಯ ಕಾರ್ಯಗಾರದಲ್ಲಿ
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಧ್ಯಾ ಪಕ, ಹಣಕಾಸು ನಿಯಂತ್ರಣಾಧಿಕಾರಿ
ಡಾ. ಪ್ರಮೋದಕಟ್ಟಿ ಅವರಿಗೆ ಅಂತರ ರಾಷ್ಟ್ರೀ ಯ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಲಾ ಯಿತು.
ರಾಯಚೂರಿನಲ್ಲಿ ಕಳೆದ 27 ವರ್ಷದಿಂದ ಶಿಕ್ಷಣ, ಸಂಶೋಧನೆ, ವಿಸ್ತರಣೆ, ಆಡಳಿತ ಮತ್ತು ಪ್ರಕಟಣೆ ವಿಭಾಗದಲ್ಲಿ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ ಅಂತರರಾಷ್ಟ್ರೀಯ ವಿಜ್ಞಾನ ಮತ್ತು ಸಂಶೋಧನೆ ಅಕಾಡಮಿ ಕೋಲ್ಕತ್ತಾ ಇವರು ಅಕಾಡಮಿ ಫೆಲೋಶಿಪ್ ಪ್ರಶಸ್ತಿ ನೀಡಿದೆ.
ಈ ಅಂತರರಾಷ್ಟ್ರೀಯ ಕಾರ್ಯಗಾರದಲ್ಲಿ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಫೆಡರೇಷನ್ ಕಾರ್ಯದರ್ಶಿ ಡಾ. ತನ್ಮಯ ರುದ್ರ, IASRನ ಅಧ್ಯಕ್ಷ ಡಾ. ಸುಧೀಪ ಭರತ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ಕುಲಪತಿ ಡಾ. ಎಮ್. ಹನುಮಂತಪ್ಪ ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರಿನ ಕುಲಪತಿ ಡಾ. ಸುರೇಶ ಸೇರಿದಂತೆ ಅನೇಕರು ಇದ್ದರು.
ಈ ಮೂರು ದಿನಗಳ ಅಂತರರಾಷ್ಟ್ರೀಯ ಕಾರ್ಯಗಾರದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಜ್ಞಾನಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.