ರಾಯಚೂರು.ರಕ್ತದಾನ ಜೀವದಾನ, ವೈದ್ಯಕೀ ಯ ರಂಗ ಬಹಳಷ್ಟು ಮುಂದುವರೆದಿದ್ದು, ಕೃತಕ ಅಂಗಾಗಳನ್ನು ಸೃಷ್ಠಿಸಿ, ಅಂಗಾಗ ಕಸಿಮಾಡುತ್ತಾ ಅನೇಕ ವಿಸ್ಮಯಗಳನ್ನು ವೈದ್ಯಲೋಕ ಮಾಡಿ ದರೂ ರಕ್ತ ತಯಾರು ಮಾಡುವುದರಲ್ಲಿ ಯಶಸ್ವಿಯಾಗಿಲ್ಲ.ಇದನ್ನು ತಯಾರು ಮಾಡಲು ಯಾವುದೇ ಸಂಶೋಧಕರಿಗೂ ವೈದ್ಯರಿಗೂ ಇನ್ನೂ ಸಾಧ್ಯವಾಗಿಲ್ಲ ಎಂದು ಟಾಗೋರ ಸ್ಮಾರಕ ಪ್ರೌಢಶಾಲೆಯ ಎನ್ ಸಿಸಿ ಅಧಿಕಾರಿ ಜ್ಞಾನರಾಜ. ಬಿ ಹೇಳಿದರು.
ನಗರದ ಬಿ.ಆರ್.ಬಿ ಕಾಲೇಜಿನಲ್ಲಿ 35 ನೇ ಕರ್ನಾಟಕ ಬಟಲಾಯಿನ್ ಎನ್ ಸಿ ಸಿ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ರಕ್ತದಾನ ಅವಶ್ಯಕತೆ, ಉಪಯೋಗ ಮತ್ತು ಅನಿವಾರ್ಯತೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು, ರಕ್ತವನ್ನು ಒಬ್ಬ ವ್ಯಕ್ತಿಯ ಧಾನದ ಮೂಲಕವೇ ಪಡೆಯ ಬೇಕು ಹೊರತು ಕೃತಕ ಸೃಷ್ಠಿಮಾಡಲು ಸಾಧ್ಯವಿಲ್ಲ ಎಂದರು.
ರಕ್ತದಾನ ಶಿಬಿರದಲ್ಲಿ 60 ಕಿಂತ ಹೆಚ್ಚು ವಿದ್ಯಾರ್ಥಿ ಗಳು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ರಿಮ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ. ಅಹ್ಮದ್ ಹುಸೇನ್, ಬಿ.ಆರ್. ಬಿ ಕಾಲೇಜಿನ ಪ್ರಾಚಾರ್ಯ ಡಾ.ಶೀಲಾದಸ್, ಜೆಸಿಓ ಕಿಶನ್ ಕುಮಾರ,
35 ಕರ್ನಾಟಕ ಬಟಲಾಯಿನ್ ಎನ್ ಸಿ ಸಿ ಅಧಿಕಾರಿಗಳಾದ ಲೆಫಿಟಿನೆಂಟ್ ಶಿವರಾಜ, ಫಸ್ಟ್ ಆಫೀಸರ್ ರಂಗನಾಥ, ಸೆಕೆಂಡ್ ಆಫೀಸರ್ ರಾಮಕೃಷ್ಣ, ಥರ್ಡ್ ಆಫೀಸರ್ ನರಸಿಂಹಲು, ಡಿಪಿಐ ಸ್ಟಾಫ್, ಆಫೀಸ್ ಸಿಬ್ಬಂದಿಗಳಾದ ಶಿವಪ್ರಸಾದ, ಫಿರೋಜ್, ರಾಜು ಸೇರಿದಂತೆ ನಗರದ ಎಲ್ಲಾ ಕಾಲೇಜಿನ ಎನ್ ಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.