ರಾಯಚೂರು.ಕಾಟೆ ದರ್ವಾಜಾ ಬಳಿ ನಿರ್ಮಾಣ ಮಾಡುತ್ತಿರುವ ಕಮಾನು ಕಾಮಗಾರಿಯನ್ನು ಪುರಾತತ್ವ ಇಲಾಖೆ ಸೂಚನೆ ಮೇರೆಗೆ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಸಿದ್ದಯ್ಯ ಹೀರೆಮಠ ಶಾಸಕ ಡಾ.ಶಿವರಾಜ ಪಾಟೀಲ್ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದರು.
ಬಿಜೆಪಿ ಮುಖಂಡರ ನೇತೃತ್ವದ ನಿಯೋಗ ನಗರಸಭೆಗೆ ತೆರಳಿ ಪೌರಾಯುಕ್ತರನ್ನು ಭೇಟಿ ಮಾಡಿದರು. ನಗರಸಭೆ ಸಭಾಂಗಣದಲ್ಲಿ ಸಭೆಯಲ್ಲಿ ಶಾಸಕ ಶಿವರಾಜ ಪಾಟೀಲ್ ಮಾತನಾಡಿ,
ಕಾಟೆ ದರ್ವಾಜಾ ಬಳಿ ಕಮಾನು ನಿರ್ಮಾಣ ಮಾಡುತ್ತಿದ್ದು, ಕಾಟೆ ದರ್ವಾಜಾ ಪುರಾತತ್ವ ಇಲಾಖೆಗೆ ಒಳಪಟ್ಟಿದ್ದು, ಅಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ, ಕಟ್ಟಿದರೆ ಕಾನೂನು ಬಾಹಿರವಾ ಗುತ್ತದೆ, ಸುಮಾರು ವರ್ಷಗಳ ಹಿಂದೆ ಕಾಟೆ ದರವಾಜ್ ಮೂಲಕ ಒಳ ರಸ್ತೆಯಿದ್ದು ಹಂತ ಹಂತವಾಗಿ ಒತ್ತುವರಿ ಮಾಡಿಕೊಂಡು ದರ್ಗಾ ನಿರ್ಮಾಣ ಮಾಡಿದ್ದಾರೆ, ಈ ಹಿಂದೆ ಯಾವುದೇ ದರ್ಗಾ ಇರಲಿಲ್ಲ, ಒಂದೊAದಾಗಿ ಒತ್ತುವರಿ ಮಾಡಿ ಕಟ್ಟುತಿದ್ದಾರೆ, ಈ ಬಗ್ಗೆ ಪುರಾತತ್ವ ಇಲಾ ಖೆಗೆ ಪತ್ರ ಬರೆದಿದ್ದು, ಕಾನೂನು ಬಾಹಿರವೆಂದು ಹೇಳಿದೆ, ನಗರಸಭೆಗೂ ಮತ್ತು ವಕ್ಫ್ ಬೋರ್ಡಿಗೂ ಪತ್ರ ಬರೆದಿದೆ, ಇದೀಗ ಕಮಾನು ನಿರ್ಮಾಣ ಕಾರ್ಯ ನಡೆದಿದ್ದು ಕಾಮಗಾರಿ ಸ್ಥಗಿತಗೊಳಿಸಬೇಕೆಂದರು.
ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ಕಾಟೆ ದರ್ವಾಜಾ ಬಳಿ ನಿರ್ಮಾಣ ಮಾಡುತ್ತಿರುವ ಕಮಾನು ಕಾನೂನು ಬಾಹಿರವಾಗಿದೆ, ಕಳೆದ ಮೂರು ದಿನಗಳ ಹಿಂದೆ ನಗರಸಭೆ ಪೌರಾಯು ಕ್ತರಿಗೆ ಗಮನಕ್ಕೆ ತಂದಿದ್ದೇವೆ, ಇಲ್ಲಿ ಕಮಾನು ನಿರ್ಮಾಣ ಮಾಡಿದ ಮೇಲೆ ಸಂಪೂರ್ಣವಾಗಿ ಒತ್ತುವರಿಯಾಗುತ್ತದೆ, ನಗರಸಭೆಯಿಂದ ನಿರ್ಮಾ ಣ ಮಾಡಲಾಗುತ್ತಿದೆ. ಈ ಹಿಂದೆ ರಸ್ತೆ ಏಕ ಮುಖ ಸಂಚಾರವಾಗಿತ್ತು, ಎಡಬದಿಯಿಂದ ಬಜಾರಕ್ಕೆ ಹೋಗುವುದು, ಬಲದಿಂದ ಬರುವ ರಸ್ತೆಯಾಗಿತ್ತು, ಇದೀಗ ಒಳಗಡೆ ದರ್ಗಾ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಪರವಾನಗಿ ಯಾರು ಕೊಟ್ಟಿದ್ದಾರೆ, ಇದೀಗ ನಗರಸಭೆಯೇ ಕಮಾನು ಮಾಡಿಸುತ್ತಿದ್ದು, ಕಾನೂನು ಬಾಹಿರ ಪುರಾತತ್ವ ಇಲಾಖೆಗೆ ಬರುವ ಕಾಟೆ ದರ್ವಾಜಾ ಅವರ ಅನುಮತಿ ಇಲ್ಲದೆ ಕಮಾನು ನಿರ್ಮಾಣ ಕಾನೂನು ಬಾಹಿರ ಎಂದು ತಿಳಿಸಿದರು.
ಹಂತ ಹಂತವಾಗಿ ಕಮಾನು ಮಾಡುಕೊಂಡು ಮುಂದಿನ ದಿನಗಳಲ್ಲಿ ಮೇಲ್ಚಾವಣಿಯ ಹಾಕಿಕೊಂಡು ದಾರಿ ಬಂದ್ ಮಾಡುತ್ತಾರೆ, ಇದಕ್ಕೆ ಅವಕಾಶ ಮಾಡಿಕೊಡಬಾರದು, ಕೂಡಲೇ ಎಚ್ಚೆತ್ತುಕೊಂಡು ಕೆಲಸ ನಿಲ್ಲಿಸಬೇಕು, ಕಮಾನು ನಿರ್ಮಾಣಕ್ಕೆ ಹಾಕಿರುವ ಮರಳು, ಕಲ್ಲುಗಳು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.
ಎನ್ ಶಂಕ್ರಪ್ಪ ಮಾತನಾಡಿ, ಕಾಟೆ ದರ್ವಾಜಾ ಒಂದು ಐತಿಹಾಸಿಕ ಸ್ಥಳ ಪುರಾತತ್ವ ಇಲಾಖೆಗೆ ಒಳಪಡುವ ಈ ಸ್ಥಳದಲ್ಲಿ ಸ್ವಾತಂತ್ರ್ಯ ದಿನ ಸಂದರ್ಭದಲ್ಲಿ ಮೇಲ್ಬಾಗದಲ್ಲಿ ದ್ವಜಾರೊಹಣ ಮಾಡಿದ್ದೇವೆ, ಈಗ ಮೇಲ್ಗಡೆ ಹೋಗಲು ದಾರಿ ಇಲ್ಲದಂತಾಗಿದೆ, ಒತ್ತುವರಿ ಮಾಡಿ ದರ್ಗಾ ನಿರ್ಮಾಣ ಮಾಡಿದ್ದಾರೆ, ಪುರಾತತ್ವ ಇಲಾಖೆಗೆ ಒಳ ಪಡಿದ್ದು ಯಾರು ಪರವಾನಗಿ ನೀಡಿದ್ದಾರೆ, ನಗರಸಭೆಯು ಇಲ್ಲಿ ಯಾಕೆ ಕಮಾನು ನಿರ್ಮಾಣ ಮಾಡುತ್ತಿದೆ, ಪುರಾತತ್ವ ಇಲಾಖೆಗೆ ಮಾಹಿತಿ ಇಲ್ಲದೇ ಐತಿಹಾಸಿಕ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಕೂಡಲೇ ಕಮಾನು ನಿರ್ಮಾಣ ಮಾಡುತ್ತಿರುವುದ ನ್ನು ತೆರವುಗೊಳಿಸಬೇಕು, ಇಲ್ಲದಿದ್ದಲ್ಲಿ ಮುಂದೆ ಅನಾಹುತಕ್ಕೆ ತಾವು ಹೊಣೆಗಾರರಾಗುತ್ತೀರಿ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ತೆರವುಗೊಳಿಸಬೇಕು ಎಂದರು.
ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಮಾತನಾಡಿ, ಈ ಹಿಂದೆ ನಗರಸಭೆ ಪೌರಾಯುಕ್ತರ ಸಂದರ್ಭದಲ್ಲಿ ಸಾಮಾನ್ಯ ಸಭೆಯಲ್ಲಿ ಕಮಾನು ಮಾಡಲು ವಿಷಯ ತೆಗೆದುಕೊಂಡಿತ್ತು, ಈ ಬಗ್ಗೆ ಪರಿಶೀಲನೆ ಮಾಡಲಾಗುವುದು, ಕಾಟೆ ದರ್ವಾಜಾ ಬಳಿ ಕಮಾನು ನಿರ್ಮಾಣಕ್ಕೆ ಸಂಬAಧಿಸಿದAತೆ ಪುರಾತತ್ವ ಇಲಾಖೆಯಿಂದ ಆಕ್ಷೇಪಣಾ ಪತ್ರ ಬಂದಿದೆ. ಕೆಲಸ ಸ್ಥಗಿತಗೊಳಿಸಲಾಗಿದೆ. ಪುರಾತತ್ವ ಇಲಾಖೆಗೆ ಒಳಪಡುತ್ತಿರುವುದರಿಂದ ಕೆಲಸ ನಿಲ್ಲಿಸಿ, ರಸ್ತೆಯಲ್ಲಿ ಹಾಕಿದ್ದ ಮರಳು, ಮತ್ರು ಕಂಕರ್ ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ತಿಳಿಸಿದರು.
ಈ ಹಿಂದಿನ ಪೌರಾಯುಕ್ತರು ಸಾಮಾನ್ಯ ಸಭೆಯಲ್ಲಿ ಕಾಟೆ ದರ್ವಾಜಾ ಬಳಿ ಕಮಾನು ನಿರ್ಮಾಣಕ್ಕೆ ಟೆಂಡರ್ ಕರೆದು ಕೆಲಸ ನಿಡೀತ್ತು, ನಿನ್ನೆಯಷ್ಟೆ ಮಾಹಿತಿ ತಿಳಿಸಿ ಕೆಲಸ ನಿಲ್ಲಿಸಲಾಗಿದೆ, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಸ್ಪಿ ಸತ್ಯ ನಾರಾಯಣ ರಾವ್, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಶಶಿರಾಜ ಮಸ್ಕಿ, ನಾಗರಾಜ ಬಾಲ್ಕಿ, ಶಿವಬಸಪ್ಪ ಮಾಲೀ ಪಾಟೀಲ್, ಆಂಜನೇಯ ಕಡಗೋಲ್, ಪಿ.ಗೋವಿಂದ, ನರಸಪ್ಪ ಯಕ್ಲಾಸಪೂರ, ನರಸರೆಡ್ಡಿ, ಗಿರಿಶ ಕನಕವೀಡು, ರಾಜ ಕುಮಾರ, ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಇದ್ದರು.