Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಒಂದೇ ಸೂರಿನಡಿ ಸೌಲಭ್ಯಗಳ ಒದಗಿಸಲು ಕೌಂಟರ್ ಸಿಸ್ಟಮ್ ವ್ಯವಸ್ಥೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಿ- ಸಚಿವ ಬೋಸರಾಜ

ಒಂದೇ ಸೂರಿನಡಿ ಸೌಲಭ್ಯಗಳ ಒದಗಿಸಲು ಕೌಂಟರ್ ಸಿಸ್ಟಮ್ ವ್ಯವಸ್ಥೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಿ- ಸಚಿವ ಬೋಸರಾಜ

ರಾಯಚೂರು. ನಗರದ ಜನತೆಗೆ ಒಂದೇ ಸೂರಿನಡಿ ಸೌಲಭ್ಯಗಳ ಅವಕಾಶ ಕಲ್ಪಿಸಲು, ಸರಳವಾಗಿ ಇ-ಖಾತ, ಮುಟೇಷನ್, ತಿದ್ದುಪಡಿ, ತೆರಿಗೆ ಪಾವತಿ, ಕುಂದುಕೊರತೆಗಳ ಮಾಹಿತಿ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಸಕಾಲ ಸೇವೆ (ಸಿಂಗಲ್ ವಿಂಡೋ ಸಿಸ್ಟಮ್) ಕೌಂಟರ್ ಗಳನ್ನು ನಗರಸಭೆಯು ಆರಂಭಿಸಿದ್ದು ನಗರ ನಿವಾಸಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್ಎಸ್ ಬೋಸರಾಜು ಹೇಳಿದರು‌.

ನಗರದ ನಗರಸಭೆಯಲ್ಲಿ ಸಾರ್ವಜನಿಕ ಸೇವೆಗಳ ಕೌಂಟರ್ ಸಿಸ್ಟಮ್ ಉದ್ಘಾಟಿಸಿ ಮಾತನಾಡಿದರು,
ನಗರದ ಜನತೆಗೆ ಸಾರ್ವಜನಿಕ ಸೇವೆ ಸುಗಮವಾಗಿ ದೊರೆಯಲು ಹಾಗೂ ಇ- ಖಾತ, ಮೊಟೇಷನ್ ಗಾಗಿ ತೊಂದರೆ ಪಡೆಯದೆ ಕೌಂಡರ್ ವ್ಯವಸ್ಥೆ ಮಾಡಲಾಗಿದೆ, ಎಲ್ಲಾ ವಾರ್ಡ್‌ಗಳ ಪ್ರತೇಕ ಕೌಂಟರ್‌ಗಳಿದ್ದು, ಜೊತೆಗೆ ಹೆಲ್ಪ್ ಲೈನ್ ಕೌಂಟರ್ ಸಹ ಮಾಡಿದೆ, ಯಾವುದೇ ಸಮಸ್ಯೆಗಳಿದ್ದಲ್ಲಿ ಇಲ್ಲಿ ತಮ್ಮ ಸಮಸ್ಯೆ ತಿಳಿಸಬಹುದು ಎಂದರು.
ನಗರಸಭೆ ಅಧಿಕಾರಿಗಳು ಸಹ ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡಬೇಕು, ಅಧಿಕಾರಿಗಳು ಉತ್ತಮ ಕೆಲಸ ಮಾಡಿದಾಗ ಮಾತ್ರ ಜನರಿಗೆ ಅನುಕೂಲವಾಗುತ್ತದೆ, ನಗರದಲ್ಲಿ ಅನೇಕ ಸಮಸ್ಯೆಗಳಿದ್ದು, ನಗರಸಭೆಯ ಮೇಲೆ ಆಧಾರವಾಗಿದ್ದಾರೆ, ಎಲ್ಲಾ ವಾರ್ಡ್ ಗಳ ಸದಸ್ಯರು ತಮ್ಮ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಆಲಿಸಲಿದ್ದು, ಎಲ್ಲಿ ಕುಡಿಯುವ ನೀರಿನ ತೊಂದರೆ ಇದ್ದಲ್ಲಿ ಸರಿಪಡಿಸುವ ಕೆಲಸ ಮಾಡಲಾವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಹಿರಿಯ ನಗರ ಸಭೆ ಸದಸ್ಯ ಜಯಣ್ಣ, ಶಾಂತಪ್ಪ, ಜಿಂದಪ್ಪ, ಬಸವರಾಜರಡ್ಡಿ, ರಮೇಶ, ಭೀಮರಾಯ್, ಶಾಂತಪ್ಪ, ನರಸಿಂಹಲು ಮಾಡಗಿರಿ, ಆಂಜನೇಯ್ಯ ಕಡಗೋಲ್, ದರೂರ್ ಬಸವರಾಜ್ ಸೇರಿದಂತೆ ಅನೇಕರು ಇದ್ದರು‌.

Megha News