Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಉದ್ಯೋಗ ಖಾತ್ರಿ ಅಕ್ರಮ, ಹಣ ದುರ್ಬಳಕೆ ಆರೋಪ, 4 ಜನ ಪಿಡಿಒ ಅಮಾನತು

ಉದ್ಯೋಗ ಖಾತ್ರಿ ಅಕ್ರಮ, ಹಣ ದುರ್ಬಳಕೆ ಆರೋಪ, 4 ಜನ ಪಿಡಿಒ ಅಮಾನತು

ದೇವದುರ್ಗ. ತಾಲೂಕಿನಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಅಕ್ರಮದ ಪ್ರಕರಣಕ್ಕೆ ಸಂಬಂದಿಸಿದಂತೆ ಅತಿಹೆಚ್ಚು ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ನಾಲ್ಕು ಆರು ಗ್ರಾಮ ಪಂಚಾಯ್ತಿ ನಾಲ್ಕು ಜನ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್‌ಗೊಳಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕರಾಂ ಆದೇಶಿಸಿದ್ದಾರೆ.

ಕ್ಯಾದಿಗೇರಾ ಮತ್ತು ಕೊತ್ತದೊಡ್ಡಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸಿ.ಬಿ.ಪಾಟೀಲ್, ಗಾಣಧಾಳ ಮತ್ತು ಸೋಮನಮರಡಿ ಗ್ರಾಮ ಪಂಚಾಯ್ತಿಯ ಮಲ್ಲಪ್ಪ, ಕೆ.ಇರಬಗೇರಾ, ದೊಂಡAಬಳಿ, ಜಾಲಹಳ್ಳಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯಾಗಿದ್ದ ಫತ್ತೆಪ್ಪ ರಾಠೋಢ ಮತ್ತು ಶಾವಂತಗೇರಾ ಪಂಚಾಯ್ತಿಯ ಗುರುಸ್ವಾಮಿ ಇವರನ್ನು ಅಮಾನತ್‌ಗೊಳಿಸಲಾಗಿದೆ.
ದೇವದುರ್ಗ ತಾಲೂಕಿನ ೩೩ ಗ್ರಾಮ ಪಂಚಾಯ್ತಿಗಳಲ್ಲಿ ಉದ್ಯೋಗ ಖಾತ್ರಿ ಸಮಾಜಿಕಲೆಕ್ಕ ಪರಿಶೋಧನೆಯಲ್ಲಿ ಆರು ಗ್ರಾಮಪಂಚಾಯ್ತಿಗಳಲ್ಲಿ ಅತಿಹೆಚ್ಚು ಖರ್ಚು ತೋರಿಸಲಾಗಿದ್ದು ದಾಖಲೆ ನೀಡದೇ ಇರುವದು, ಕಳಪೆ ಕಾಮಗಾರಿ ನಿರ್ವಹಿಸಿರುವದು ಸೇರಿದಂತೆ ಅಕ್ರಮ ಹಣ ವರ್ಗಾವಣೆ ಗೊಂಡಿರುವ ಆರೋಪಗಳನು ಪಿಡಿಓಗಳು ಎದುರಿಸುತ್ತಿದ್ದಾರೆ.
೨೦೨೦-೨೧ ಸಾಲಿನಲ್ಲಿ ನಡೆದಿರುವ ಅಕ್ರಮದ ಕುರಿತು ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಿ ನೀಡಲಾಗಿರುವ ಮಧ್ಯಂತರ ವರದಿ ಆಧಾರಿಸಿ ನಾಲ್ಕು ಜನರನ್ನು ಮೊದಲ ಹಂತದಲ್ಲಿ ಅಮಾನತ್‌ಗೊಳಿಸಿ ಆದೇಶಿಸಲಾಗಿದೆ. ಕೊತ್ತದೊಡ್ಡಿ ಗ್ರಾಮ ಪಂಚಾಯಿಯಲ್ಲಿ ೩ ಕೋಟಿ ೨೪ ಲಕ್ಷ ರೂ, ಸಸಸೋಮನಮರಡಿ ಪಂಚಾಯ್ತಿಯಲ್ಲಿ ೮ ಕೋಟಿ ೬೦ ಲಕ್ಷ ರೂ, ಶಾವಂತಗೇರಾ ಪಂಚಾಯ್ತಿಯಲ್ಲಿ ೧ ಕೋಟಿ ೬೦ ಲಕ್ಷ ರೂ ಹಾಗೂ ಗಾಣಧಾಳ ಪಂಚಾಯ್ತಿಯಲ್ಲಿ ೯ ಕೋಟಿ ೮೮ ಲಕ್ಷ ರೂ ಖಾತ್ರಿಯೋಜನೆ ಹಣ ಬಳಕೆಯಲ್ಲಿ ಅಕ್ರಮ, ಕಳಪೆ ಕಾಮಗಾರಿ ನಡೆಸಿರುವ ದೂರು ಕೇಳಿಬಂದಿದೆ. ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಅಕ್ರಮವಾಗಿರುವ ಹಣವನ್ನು ಪಂಚಾಯ್ತಿ ಪಿಡಿಓಗಳಿಂದಲೇ ವಸೂಲಿ ಮಾಡಲು ಈಗಾಗಲೇ ಆದೇಶಿಸಲಾಗಿದೆ. ಆದರೆ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಇಷ್ಟೊಂದು ಅಕ್ರಮವಾಗಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಅಲ್ಲದೇ ಅನೇಕ ಆಡಳಿತಾರೂಢ ಶಾಸಕರ ಬಳಿ ಹೋಗಿಯೂ ಅಕ್ರಮ ಆರೋಪದಿಂದ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಕಳೆದ ತಿಂಗಳು ೨೪ ರಂದು ತಾಲೂಕ ಪಂಚಾಯ್ತಿಯ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹೀರೆಮಠ ಹಾಗೂ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕರಾಗಿದ್ದ ಬಸ್ಸಣ್ಣ ನಾಯಕ ವಿರುದ್ದ ದೇವದುರ್ಗ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಇಂದಿಗೂ ಆರೋಪಿಗಳ ಬಂಧನವಾಗಿಲ್ಲ. ಈ ಮಧ್ಯೆಯೇ ಅಕ್ರಮದ ಆರೋಪದ ಮೇಲೆ ನಾಲ್ಕು ಜನಪಿಡಿಓಗಳ ಅಮಾನತ್‌ಗೊಳಿಸಲಾಗಿದೆ. ಇನ್ನುಷ್ಟು ಪಿಡಿಓಗಳು, ಹೊರಗುತ್ತಿಗೆ ನೌಕರರು, ಪಂಚಾಯ್ತಿ ಕಂಪ್ಯೂಟರ್ ಆಪರೇಟರ್‌ಗಳ ಮೇಲೆ ಕ್ರಮದ ಬಾಕಿ ಉಳಿದಿದೆ. ಯಾರು ಸೂಚನೆ ಮೇರೆಗೆ ಒಂದೇ ವೆಂಡರ್‌ಗೆ ಹಣ ಪಾವತಿಸಿರುವ ಕುರಿತು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಮಾಹಿತಿ ನೀಡಬೇಕಿದೆ.

Megha News