Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಗಮನ ಸೆಳೆದ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ: ಕುಂಭ- ಮೇಳ

ಗಮನ ಸೆಳೆದ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ: ಕುಂಭ- ಮೇಳ

ರಾಯಚೂರು. ನಾಡಿನ ಹಿರಿಮೆ ಗರಿಮೆಯನ್ನು ಸಾರಲು ಕರ್ನಾಟಕ ಸಂಭ್ರಮ ಅಂಗವಾಗಿ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-೫೦ ರಥ ಯಾತ್ರೆಯನ್ನು ಮಾನವಿ ಶಾಸಕ ಹಂಪಯ್ಯ ನಾಯಕ ನೀರಮಾನವಿಯ ಕೋಳಿ ಕ್ಯಾಂಪಿನಲ್ಲಿ ಅದ್ದೂರಿಯಾಗಿ ಶನಿವಾರ ಸ್ವಾಗತಿಸಿ, ರಥ ಯಾತ್ರೆಗೆ ಚಾಲನೆ ನೀಡಿದರು.
ತಹಸೀಲ್ದಾರ್ ಪಿರಂಗಿ ರಾಜು, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಖಾಲೀದ ಅಹಮದ ಅವರು ಜ್ಯೋತಿ ರಥ ಯಾತ್ರೆಗೆ ಚಾಲನೆ ನೀಡಿದರು.
ನಂತರ ತಹಸೀಲ್ದಾರ್ ಪಿರಂಗಿ ರಾಜು ಮಾತನಾಡಿ, ಅನೇಕ ಮಹನೀಯರ ಶ್ರಮದ ಫಲವಾಗಿ ಕನ್ನಡ ಭಾಷೆ ಸಮೃದ್ಧವಾಗಿದೆ. ಅತ್ಯಧಿಕ ಜ್ಞಾನ ಪೀಠ ಪ್ರಶಸ್ತಿ ಒಲಿದಿರುವುದು ಕನ್ನಡಕ್ಕೆ ಮಾತ್ರ. ಹೀಗಾಗಿ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಂಡು ನಿತ್ಯ ಜೀವನದಲ್ಲಿ ಕನ್ನಡ ಬಳಸುವುದರ ಜೊತೆಗೆ ಸಾಹಿತ್ಯ ಅಧ್ಯಯನಕ್ಕೆ ಮುಂದಾಗಬೇಕು. ಪ್ರಾಥಮಿಕ ಶಾಲೆ ಹಂತದಲ್ಲಿಯೇ ಮಕ್ಕಳಿಗೆ ಕನ್ನಡ ಬಳಸುವಂತೆ ತಿಳಿ ಹೇಳಬೇಕು. ಭಾಷೆ, ಜಲ, ಗಡಿ ರಕ್ಷಣೆಗೆ ಕಂಕಣ ಬದ್ಧರಾಗಬೇಕು. ಜನ ಸಾಮಾನ್ಯರಲ್ಲಿ ಭಾಷೆ ಅಭಿಮಾನ ಮೂಡಿಸಲು ರಾಜ್ಯಾದ್ಯಂತ ರಥ ಯಾತ್ರೆ ಸಂಚರಿಸಲಿದೆ ಎಂದರು.
ಮಾನವಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಖಾಲೀದ್ ಅಹಮದ್ ಮಾತನಾಡಿ, ಈ ವಿಶೇಷ ಕನ್ನಡ ರಥ ಯಾತ್ರೆ ಉದ್ದಕ್ಕೂ ಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರತಿಯೊಬ್ಬರು ಭಾಗವಹಿಸಿ, ಕಳೆ ಹೆಚ್ಚಿಸಬೇಕು. ಈ ಯಾತ್ರೆಯೂ ಇಂದು ಮಾನವಿ ಪಟ್ಟಣ, ಹಿರೇಕೋಟ್ನಕಲ್ ಹಾಗೂ ಭೋಗಾವತಿ ಮೂಲಕ ಸಂಚರಿಸಿ ಪೋತ್ನಾಳಗೆ ತೆರಳಲಿದೆ ಎಂದರು.
ಕನ್ನಡ ರಥ ಯಾತ್ರೆಯೂ ವಿವಿಧ ಗ್ರಾಮಗಳ ಮೂಲಕ ಮಾನವಿ ತಲುಪಿತು. ಒನಕೆ ಒಬ್ಬವ್ವ, ಸಂಗೊಳ್ಳಿ ರಾಯಣ್ಣ, ಇನ್ನಿತರ ಸ್ವಾತಂತ್ರ‍್ಯ ಹೋರಾಟಗಾರರ ಛದ್ಮ ವೇಷ ಧರಿಸಿದ್ದ ಮಕ್ಕಳು ಸಾರ್ವಜನಿಕರ ಗಮನ ಸೆಳೆದರು.
ಈ ಸಂದರ್ಭದಲ್ಲಿ ತಾಪಂ ವ್ಯಾವಸ್ದಪಕ ಬಸವರಾಜ ನೇಗಿನಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ಮನ್ಸೂರ್ ಅಹಮದ್, ಬಿಇಒ ಚಂದ್ರಶೇಖರ, ತಾಲ್ಲೂಕು ವೈದ್ಯಾಧಿಕಾರಿಗಳು ಶರಣ ಬಸವ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವುಕುಮಾರ, ಮಹ್ಮದ ಜುಬೇರ್, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ತಾಪಂ ಸಿಬ್ಬಂದಿ, ವಿವಿಧ ಶಾಲೆಗಳ ಶಿಕ್ಷಕರು, ಮಕ್ಕಳು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇನ್ನಿತರರು ಉಸ್ಥಿತರಿದ್ದರು.

Megha News