ಮಸ್ಕಿ.ತಾಲೂಕಿನ ಚಿಲ್ಕರಾಗಿ ಗ್ರಾಮದಲ್ಲಿನ ಅಂಗನವಾಡಿಗೆ ಸಿಡಿಪಿಒ ನಾಗರತ್ನ ಬೇಟಿ ನೀಡಿದ್ದ ಸಂದರ್ಭದಲ್ಲಿ ಕಾರ್ಯಕರ್ತೆ ಅಂಗನ ವಾಡಿ ಕೇಂದ್ರದ ಇಲ್ಲದೆ ಇರುವ ಸಂದರ್ಭದಲ್ಲಿ ಬೀಗ ಮುರಿದ ಅಧಿಕಾರಿಗಳು ಅಲ್ಲಿನ ಸಾಮಗ್ರಿಗ ಳನ್ನು ಶಾಲಾ ಕೊಠಡಿಗೆ ಸ್ಥಳಾಂತರಿಸಿ ಕೀಲಿಯ ನ್ನು ಮತ್ತೊಬ್ಬರಿಗೆ ನೀಡಿದ್ದಾರೆ.
ಕಳೆದ 20 ವರ್ಷಗಳಿಂದ ಸ್ವಂತ ಕಟ್ಟಡ ಇಲ್ಲದ ತಗಡಿನ ಶೀಟ್ನಲ್ಲಿ ಅಂಗನವಾಡಿ ನಡೆಯುತ್ತಿದ್ದು, ಜಾಲಿಗಿಡಗಳ ಮದ್ಯಗಳ ಮದ್ಯ ಅಂಗನವಾಡಿ ಕೇಂದ್ರವಿದ್ದು ಈ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರು, ಅಂಗನವಾಡಿ ಕಾರ್ಯಕರ್ತೆ ಅನಾರೋಗ್ಯದ ನಿಮಿತ್ತ ಸಹಾಯಕಿಯೊಂದಿಗೆ ಲಿಂಗಸುಗೂರಿನ ಆಸ್ಪತ್ರೆಗೆ ತೆರಳಿದ್ದರು, ಈ ವೇಳೆ
ಸಿಡಿಪಿಒ ನಾಗರತ್ನ ಮತ್ತು ಮೇಲ್ವಿಚಾರಕಿ ನೀಲಮ್ಮ ಅಂಗನವಾಡಿ ಕೇಂದ್ರಕ್ಕೆ ಬೇಟಿ ನೀಡಿ ಬೀಗ ಮುರಿದಿದ್ದಾರೆ, ಕೇಂದ್ರದಲ್ಲಿದ್ದ ಧವಸ ದಾನ್ಯಗಳು ಸೇರಿ ಇತರೆ ಸಾಮಗ್ರಿಗಳನ್ನು ಶಾಲಾ ಕೊಠಡಿಗೆ ಸ್ಥಳಾಂತರಿಸಿ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಶಾಲೆಯ ಅಡುಗೆ ಸಹಾಯಕಿಗೆ ಕೊಟ್ಟಿದ್ದಾರೆ.
ಹೊಸ ಕೇಂದ್ರದ ಕೀಲಿ ಕೈ ಇಲ್ಲದ ಕಾರಣ ಹಳೆ ಕಟ್ಟಡದಲ್ಲಿಯೇ ಮಕ್ಕಳನ್ನು ಕೂಡಿಸಿದ್ದು, ಆಹಾರ ಧಾನ್ಯ ಮತ್ತು ಅಡುಗೆ ಸಾಮಗ್ರಿ ಇಲ್ಲದ ಕಾರಣ ತಮ್ಮ ಮನೆಯಲ್ಲಿಯೇ ಉಪಾಹಾರ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜಾಲಿ ಗಿಡಗಳ ಕೇಂದ್ರದ ಸುತ್ತಲೂ ಇರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ಅಂಗನವಾಡಿ ಕಾರ್ಯಕರ್ತೆ ಗಮನಕ್ಕೆ ತಂದಿದ್ದರು, ಎಂದು ಕಾರ್ಯಕರ್ತೆ ಮಾಹಿತಿ ನೀಡಿದ್ದರು, ಕ್ರಮ ಕೈಗೊಂಡಿಲ್ಲವೆಂದು ದೂರಿದ್ದಾರೆ.