Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಯ ಪ್ರಸ್ತಾವನೆ ಸಿಎಂ ಗೆ ಸಲ್ಲಿಕೆ: ಸಚಿವ ಎನ್ ಎಸ್ ಭೋಸರಾಜು

ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಯ ಪ್ರಸ್ತಾವನೆ ಸಿಎಂ ಗೆ ಸಲ್ಲಿಕೆ: ಸಚಿವ ಎನ್ ಎಸ್ ಭೋಸರಾಜು

ಬೆಂಗಳೂರು: ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಯ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಪ್ರಸ್ತಾವನೆ ಸಿದ್ದಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸದ್ಯದಲ್ಲೇ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಭೋಸರಾಜು ತಿಳಿಸಿದರು.

ಇಂದು ವಿಕಾಸಸೌಧದಲ್ಲಿ ಕೆರೆ ಬಳಕೆದಾರರ ಸಂಘಗಳ ಕಾರ್ಯಚಟುವಟಿಕೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸರಕಾರವು 2023-24 ನೇ ಸಾಲಿನ ಬಜೆಟ್ನಲ್ಲಿ ಸಂಘಗಳ ಬಲವರ್ಧನೆಗೊಳಿಸುವುದಾಗಿ ಘೋಷಣೆ ಮಾಡಿದೆ. ಈ ಕೆರೆ ಬಳಕೆದಾರರ ಸಂಘಗಳನ್ನ ಬಲವರ್ಧನೆಗೊಳಿಸಿದಲ್ಲಿ ಕೆರೆಗಳನ್ನ ಅಭಿವೃದ್ದಿಗೊಳಿಸುವುದು ಹಾಗೂ ಅಂತರ್ಜಲವನ್ನ ವೃದ್ದಿಗೊಳಿಸುವುದು ಸಾಧ್ಯವಿದೆ. ರೈತರಿಗೆ ಕೆರೆ ಸಂಘಗಳಲ್ಲಿ ಹೆಚ್ಚಿನ ಆದ್ಯತೆ ನೀಡುವ ಜೊತೆಯಲ್ಲಿಯೇ, ಕೆರೆ ಸಂಘಗಳನ್ನ ಆರ್ಥಿಕವಾಗಿ ಸಧೃಢಗೊಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಸಣ್ಣ ನೀರಾವರಿ ಇಲಾಖೆ ಅಷ್ಟೇ ಅಲ್ಲದೇ, ಗ್ರಾಮೀಣಾಭಿವೃದ್ದಿ ವ್ಯಾಪ್ತಿಯಲ್ಲಿ 28345 ಹಾಗೂ ಬೃಹತ್ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 2082 ಕೆರೆಗಳಿವೆ. ಈ ಕೆರೆಗಳಲ್ಲಿ ಕೇವಲ ಕೆರೆಬಳಕೆದಾರರ ಸಂಘಗಳ ರಚನೆಯಿಂದ ಮಾತ್ರ ಅವುಗಳ ಬಲವರ್ಧನೆ ಸಾಧ್ಯವಿಲ್ಲ.
ಕೆರೆ ಸಂಘಗಳನ್ನ ಆರ್ಥಿಕವಾಗಿ ಬಲವರ್ಧನೆಗೊಳಿಸುವ ಉದ್ದೇಶದಿಂದ ಹಲವಾರು ಅಂಶಗಳನ್ನ ಅಳವಡಿಸುವ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಕೆರೆಗೆ ಸೇರಿದ ನೀರು ನಿಲ್ಲುವ ಅಂಗಳ ಹೊರತುಪಡಿಸಿ ಇತರೆ ಪ್ರದೇಶದಲ್ಲಿ ಹುಲ್ಲು ಬೆಳೆದು ಮಾರಾಟ ಮಾಡುವುದು, ಕೆರೆ ಅಂಚು ಹಾಗೂ ಕೆಳಭಾಗದಲ್ಲಿ ಹಣ್ಣು ಅಥವಾ ತೆಂಗಿನ ಗಿಡಗಳನ್ನ ನೆಟ್ಟು ಅದರಿಂದ ಆದಾಯ ಬರುವಂತೆ ಮಾಡುವುದು, ಮೀನುಗಾರಿಕೆ ಉತ್ಪನ್ನದಲ್ಲಿ ಶೇಕಡಾವಾರು ಸಂಘಗಳಿಗೆ ಆಧಾಯ ಹಂಚಿಕೆ, ಜಲಕ್ರೀಡೆ/ಬೋಟಿಂಗ್ ಆದಾಯದಲ್ಲಿ ಕೆರೆ ಸಂಘಕ್ಕೆ ಪಾಲು, ಜಾಹೀರಾತು ಫಲಕಗಳ ಆದಾಯದಲ್ಲಿ ಪಾಲು ಹೀಗೆ ಹಲವಾರು ಆರ್ಥಿಕ ಮೂಲಗಳ ಬಗ್ಗೆ ಸಭೆಯಲ್ಲಿ ವ್ಯಾಪಕವಾಗಿ ಚರ್ಚಿಸಲಾಯಿತು.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಗೆ ಮಾರ್ಗಸೂಚಿಗಳ ಪ್ರಸ್ತಾವನೆಯನ್ನ ಸಿದ್ದಪಡಿಸಲಾಗುವುದು. ಈ ಪ್ರಸ್ತಾವನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಹಾಗೂ ಅವರ ಒಪ್ಪಿಗೆಯ ನಂತರ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

Megha News