Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ವಾರ್ಡ್ ನಂ.12ರ ಉಪ ಚುನಾವಣೆ ಫಲಿತಾಂಶ 2627 ಮತಗಳು ಪಡೆದ ಕಾಂಗ್ರೆಸ್ ಅಭ್ಯರ್ಥಿ ಪವನ ಕುಮಾರ ಎಂ. ಗೆಲುವು

ವಾರ್ಡ್ ನಂ.12ರ ಉಪ ಚುನಾವಣೆ ಫಲಿತಾಂಶ 2627 ಮತಗಳು ಪಡೆದ ಕಾಂಗ್ರೆಸ್ ಅಭ್ಯರ್ಥಿ ಪವನ ಕುಮಾರ ಎಂ. ಗೆಲುವು

ರಾಯಚೂರು. ನಗರದ ವಾರ್ಡ್ ನಂ.12ರ ಉಪ ಚುನಾವಣೆ ಫಲಿತಾಂಶ ಘೋಷಣೆಯಾ ಗಿದ್ದು ಕಾಂಗ್ರೆಸ್ ಅಭ್ಯರ್ಥಿ ಪವನ ಕುಮಾರ ಎಂ. 2627 ಮತಗಳನ್ನು ಪಡೆದು ಗೆಲುವು ಸಾಧಿಸಿ ದ್ದಾರೆ.
ನಗರದ ವಾರ್ಡ್ 12ರಲ್ಲಿ ನಗರಸಭೆ ಸದಸ್ಯ ತೆರವಾದ ಸ್ಥಾನಕ್ಕೆ ಉಪ ಚುನಾವಣೆಯ ಫಲಿತಾಂಶ ಇಂದು ನಗರದ ತಹಶಿಲ್ದಾರ್ ಕಚೇರಿಯಲ್ಲಿ ನಡೆಯಿತು.
ವಾರ್ಡ್ ನಂ.12ರಲ್ಲಿ ಮೂರು ಜನ ಸ್ಪರ್ಧೆ ಮಾಡಿದ್ದರು, ಕಾಂಗ್ರೆಸ್ ಅಭ್ಯರ್ಥಿ ಪವನ ಕುಮಾರ ಎಂ, ಜೆಡಿಎಸ್ ಅಭ್ಯರ್ಥಿ ಮೀರ್ ಅಬ್ದುಲ್ ರಹೀಮ್, ಪಕ್ಷೇತತರಾಗಿ ನೂರ್ ಪಾಷಾ ಸ್ಪರ್ಧಿಸಿದ್ದರು. ಪವನ ಕುಮಾರ ಎಂ. ಅವರು 2627 ಮತಗಳು ಪಡೆದರೆ, ಮೀರ್ ಅಬ್ದುಲ್ ರಹೀಮ್ ಅವರು 359 ಮತಗಳು ಪಡೆದುಕೊಂಡರು. ನೂರ್ ಪಾಷಾ ಅವರು 140 ಮತಗಳು ಪಡೆದು ಕೊಂಡಿದ್ದಾರೆ. ಜೊತೆಗೆ 18 ನೋಟಾ ಮತಗಳಾಗಿವೆ.
2627 ಮತಗಳ ಪಡೆದುಕೊಂಡ ಪವನ ಕುಮಾರ ಎಂ. ಅವರು ಜಯಶಾಲಿಯಾಗಿದ್ದಾರೆ ಎಂದು ವಾರ್ಡ್ ನಂ.12ರ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

Megha News