ರಾಯಚೂರು. ರಾಷ್ಟ್ರೀಯ ಹೆದ್ದಾರಿ 167 ಗೆ ಹೊಂದಿಕೊಂಡಿರುವ ದೇವಸೂಗೂರು ಹತ್ತಿರದ ಕೃಷ್ಣಾ ನದಿಯ ಸೇತುವೆಯು ವಾನಹನಗಳ ಸಂಚಾರಕ್ಕೆ ಯೋಗ್ಯವಾಗಿರದ ರೀತಿಯಲ್ಲಿ ರಸ್ತೆ ಹಾಳಾಗಿದ್ದು,ಸೇತುವೆಯನ್ನು ರಿಪೇರಿಗೊಳಿಸಲು ಸೇತುವೆಯ ಉದ್ದ ಮತ್ತು ಆಗಲಕ್ಕೆ ಕಾಂಕ್ರೀಟ್ ವಿಯರಿಂಗ್ ಕೋಟ್ ಹಾಕಲು ಸುಮಾರು 45 ದಿನಗಳ ಕಾಲವಕಾಶ ಬೇಕಾಗಿರುವ ಹಿನ್ನಲೆ ಯಲ್ಲಿ, ಜ.17 ರಿಂದ ಮಾ.1 ರವರೆಗೆ ಒಟ್ಟು 45 ದಿನಗಳ ಕಾಲ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾ ಪೋಲಿಸ್ ವರಿಷ್ಠಾ ಧಿಕಾರಿ ಆದೇಶಿಸಿದ್ದಾರೆ.
ಲಿಂಗಸುಗೂರು ರಸ್ತೆಯಿಂದ ಮಕ್ತಲ್, ಮಹೆ ಬೂಬನಗರ, ಹೈದ್ರಾಬಾದ್ ಕಡೆಗೆ ಹೋಗುವ ವಾಹನಗಳನ್ನು ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಸ್ಟೇಷನ್ ಸರ್ಕಲ್, ಆರ್.ಟಿ.ಓ. ಸರ್ಕಲ್, ಯರಗೇರಾ ಕರ್ನೂಲ್ ಕ್ರಾಸ್ ಮುಖಾಂತರ ತೆಲಂಗಾಣದ ಐಜಾ, ಗದ್ವಾಲ್ ಮುಖಾಂತರ ಸಂಚರಿಸುವುದು.
ಯರಗೇರಾ ರಸ್ತೆಯಿಂದ ಮಕ್ತಲ್, ಮಹೆಬೂಬನಗರ, ಹೈದ್ರಾಬಾದ್ ಕಡೆಗೆ ಹೋಗುವ ವಾಹನಗಳು ರಾಯಚೂರು ನಗರದಿಂದ ಯರಗೇರಾ ಕರ್ನೂಲ್ ಕ್ರಾಸ್ ಮುಖಾಂತರ ತೆಲಂಗಾಣದ ಐಜಾ, ಗದ್ವಾಲ್ ಮುಖಾಂತರ ಸಂಚರಿಸಬಹುದಾಗಿದೆ,
ರಾಯಚೂರು ನಗರದಿಂದ ಯಾದಗಿರಿ, ಕಲಬುರಗಿ ಕಡೆಗೆ ಹೋಗುವ ವಾಹನಗಳು ರಾಯಚೂರು ನಗರದಿಂದ 7ನೇ ಮೈಲ್ ಕ್ರಾಸ್, ಕಲಮಲಾ, ಗಬ್ಬೂರು, ದೇವದುರ್ಗ, ಹೂವಿನಹೆಡಗಿ ಸೇತುವೆ ಮುಖಾಂತರ ಯಾದಗಿರಿ, ಶಹಪೂರ, ಕಲಬುರಗಿ ಕಡೆಗೆ ಹೋಗುವುದು.
ಹೈದ್ರಾಬಾದ್ ಕಡೆಯಿಂದ ರಾಯಚೂರು ಕಡೆಗೆ ಬರುವ ವಾಹನಗಳು ಮರಿಕಲ್, ಆತ್ಮಕೂರು ಕ್ರಾಸ್, ಉಂಡ್ಯಾಲ, ಅಮರಚಿಂತ, ಜುರಾಲ ಡ್ಯಾಂ, ಗದ್ವಾಲ, ಐಜಾ, ಯರಗೇರಾ ಕರ್ನೂಲ್ ಕ್ರಾಸ್ ಮುಖಾಂತರ ರಾಯಚೂರು ಕಡೆಗೆ ಬರುವುದು.
ಮಕ್ತಲ್ ಕಡೆಯಿಂದ ಬರುವ ವಾಹನಗಳನ್ನು ಮತ್ತಲ್, ದಂಡ್, ರುದ್ರ ಸಮುದ್ರಂ, ಕೊಂಡ ದೊಡ್ಡಿ, ಜುರಾಲ ಡ್ಯಾಂ, ಗದ್ವಾಲ, ಐಜಾ, ಯರ ಗೇರಾ ಕರ್ನೂಲ್ ಕ್ರಾಸ್ ಮುಖಾಂತರ ರಾಯ ಚೂರು ಕಡೆಗೆ ಬರುವುದು.
ಯಾದಗಿರಿ, ಕಲಬುರಗಿ ಕಡೆಯಿಂದ ರಾಯಚೂ ರು ಕಡೆಗೆ ಬರುವ ವಾಹನಗಳು, ಯಾದಗಿರಿ, ಶಹಪೂರು, ಹತ್ತಿಗೂಡೂರು ಕ್ರಾಸ್, ಹೂವಿನಹೆ ಡಗಿ ಸೇತುವೆ, ದೇವದುರ್ಗ, ಗಬ್ಬೂರು ಮುಖಾಂ ತರ ರಾಯಚೂರು ನಗರಕ್ಕೆ ಬರುವುದು. ಪ್ರಯಾ ಣಿಕರು ಈ ರಸ್ತೆಯಲ್ಲಿ ಸಂಚರಿಸಿ ಸಹಕರಿಸಬೇ ಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.