Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ರಸ್ತೆ ಅಪಘಾತ ಓರ್ವ ವಿದ್ಯಾರ್ಥಿ ಸಾವು ಮತ್ತೋರ್ವ ವಿದ್ಯಾರ್ಥಿಗೆ ಕಾಲು ಮುರಿತ

ರಸ್ತೆ ಅಪಘಾತ ಓರ್ವ ವಿದ್ಯಾರ್ಥಿ ಸಾವು ಮತ್ತೋರ್ವ ವಿದ್ಯಾರ್ಥಿಗೆ ಕಾಲು ಮುರಿತ

ರಾಯಚೂರು. ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ಒರ್ವ ವಿದ್ಯಾರ್ಥಿ ಸಾವನಪ್ಪಿ ದ್ದು, ಮತ್ತೊಬ್ಬ ವಿದ್ಯಾರ್ಥಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಯರಗೇರಾ ಹತ್ತಿರದ ರಾಯಚೂರು ವಿಶ್ವವಿದ್ಯಾಲಯ ಮುಂಭಾಗದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿ ಯರಗೇರಾ ಗ್ರಾಮದ ಮಹಮ್ಮದ್ ಫರಹನ್(19) ವರ್ಷ ಎಂದು ತಿಳಿದು ಬಂದಿದೆ.ಹಿಂಬದಿ ಸವಾರ ಹಾಜಿ ಹುಸೇನ್‌ಗೆ ಕಾಲು ಮುರಿದು ಗಾಯಗಳಾಗಿವೆ.
ರಾಯಚೂರಿನಿಂದ ಯರಗೇರಾ ಕಡೆಗೆ ತೆರಳುತ್ತಿರುವಾಗ ಮಂತ್ರಾಲಯಕ್ಕೆ ಹೋಗಿತ್ತಿದ್ದ ಸಾರಿಗೆ ಬಸ್ ಅತಿವೇಗದಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಗಾಯಗೊಂಡವರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೆ, ವಿದ್ಯಾರ್ಥಿ ಮಹಮ್ಮದ್ ಫರಹನ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಯರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News