ರಾಯಚೂರು. ಜಿಲ್ಲೆಯಲ್ಲಿ ವಿವಿಧ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷದಲ್ಲಿ ದರೋಡೆ, ಮನೆ ಕಳ್ಳತನ, ವಾಹನಗಳು ಚಿನ್ನಾಭರಣೆ ಕಳ್ಳತನ ಸೇರಿದಂತೆ ವಿವಿ಼ಧ ಪ್ರಕರಣಗಳನ್ನು ಬೇಧಿಸಿ ಒಟ್ಟು 113 ಪ್ರಕರಣಗಳಲ್ಲಿ 1,79,03,483 ರೂ.ಮೌಲ್ಯದ ವಸ್ತುಗಳನ್ನು ಜಪ್ತಿಮಾಡಿಕೊಂಡು 164 ಜನ ಆರೋಪಿರನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಹೇಳಿದರು.
ನಗರದ ಜಿಲ್ಲಾ ಪೋಲಿಸ್ ಮೈದಾನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,
ಜಿಲ್ಲೆಯಾದ್ಯಂತ 2023 ಜ.1 ರಿಂದ ಡಿ.31ರ ಅವಧಿಯಲ್ಲಿ ಗಾಂಜಾ ಬೆಳೆಯುವ, ಅಕ್ರಮ ಸಾಗಾಣಿಕೆ ಮಾಡುವ ಅಡ್ಡೆಗಳ ಮೇಲೆ ದಾಳಿ ಮಾಡಿ ಒಟ್ಟು 14 ಪ್ರಕರಣಗಳು ದಾಖಲಿಸಿ, 38 ಕೆ.ಜಿ 755 ಗ್ರಾಂ. ಗಾಂಜಾವನ್ನು ಜಪ್ತಿಮಾಡಲಾ ಗಿದೆ, ಸುಮಾರು 2,44,350 ರೂ. ಮೌಲ್ಯದಾ ಗಿದೆ, ಇದರಲ್ಲಿ 21 ಜನ ಆರೋಪಿತರನ್ನು ದಸ್ತಗಿರಿ ಮಾಡಲಾಗಿದೆ ಎಂದರು.
ಮಕ್ಕಳು ಸೇವಿಸುವ ಚಾಕಲೇಟ್‌ಗಳಲ್ಲಿ ಗಾಂಜಾ ದ್ರವವನ್ನು ಮಿಶ್ರಣ ಮಾಡಿ ಮಾರಾಟ ಮಾಡು ವಂತಹ ಅಂಗಡಿಗಳ ಮೇಲೆ ದಾಳಿ ಮಾಡಿ, 3 ಪ್ರಕರಣಗಳನ್ನು ದಾಖಲಿಸಿಕೊಂಡು 8 ಕೆ.ಜಿ 990 ಗ್ರಾಂ, ಚಾಕಲೇಟ್‌ಗಳನ್ನು ಜಪ್ತಿಪಡಿಸಿಕೊ ಳ್ಳಲಾಗಿದೆ, ಒಟ್ಟು ಮೌಲ್ಯ ರೂ. 5850 ರೂಪಾಯಿಗಳಾಗಿದೆ.
ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ವಿವಿಧ ಠಾಣೆಗಳಲ್ಲಿ ಎಲ್‌ಪಿಸಿ ಪ್ರಕರಣಗಳಲ್ಲಿ ತಲೆಮರೆ ಸಿಕೊಂಡ 21 ಪ್ರಕರಣಗಳಲ್ಲಿನ 29 ಜನ ಆರೋಪಿತರನ್ನು ಪತ್ತೆ ಮಾಡಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಒಟ್ಟು 19 ಪ್ರಕರಣಗಳು 10 ವರ್ಷದ ಹಳೆಯ ಪ್ರಕರಣಗಳಲ್ಲಿ 19 ಜನ ಆರೋಪಿತರನ್ನು ಪತ್ತೆ ಮಾಡಿ ನ್ಯಾಯಾಲ ಯದಲ್ಲಿ ಹಾಜರಪಡಿಸಲಾಗಿದೆ ಎಂದು ತಿಳಿಸಿದರು.
ಮೊಬೈಲ್‌ಗಳ ಕಳ್ಳತನ ಪ್ರಕರಣಗಳಿಗೆ ಸಿಇಐಆರ್ ಪೋರ್ಟ್‌ನಲ್ಲಿ ನೊಂದಾಯಿಸಿದ ಒಟ್ಟು 772 ಮೊಬೈಲುಗಳನ್ನು ಪತ್ತೆ ಮಾಡಿ ಸಾರ್ವಜನಿಕರಿಗೆ ಹಿಂದುರುಗಿಸಲಾಗಿದೆ. ಒಟ್ಟು ಮೌಲ್ಯ 1,54,40,000 ರೂ ಮೌಲ್ಯದ ಮೊಬೈಲ್ ಗಳಾಗಿವೆ
ಜಿಲ್ಲೆಯಾದ್ಯಂತ ಮಹಿಳೆ ಮತ್ತು ಮಕ್ಕಳ ಕಾಣೆ ಸೇರಿದಂತೆ ಒಟ್ಟು 242 ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ 223 ಪ್ರಕರಣಗಳನ್ನು ಪತ್ತೆ ಹಚ್ಚಿ, ಕಾಣೆಯಾದ ಸಂಬಂಧಿಕರಿಗೆ ಒಪ್ಪಿಸಲಾಗಿದೆ.
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ
ಭಾರತೀಯ ಆಯುಧ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಜಯಪ್ರಕಾಶ ಪಾಟೀಲ್ ರವರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದು, ಈ ಘಟನೆಯಿಂದ ಸಾರ್ವಜನಿಕರು ಭಯ ಮತ್ತು ಆತಂಕಕ್ಕೆ ಒಳಗಾಗಿದ್ದರಿಂದ ಕ್ಷಿಪ್ರ ಕಾರ್ಯಾಚರ ಣೆಯಿಂದ ಆರೋಪಿತರನ್ನು 48 ಗಂಟೆಯೊಳಗೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದರು.
ಬಳಗಾನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ
ಕೊಲೆಯಾದ ಮಹಿಳೆ ಪತ್ತೆ ಕುರಿತು ವಿಶೇಷ ತಂಡವನ್ನು ರಚಿಸಿ, ತೆಲಂಗಾಣ ನಾಗರಕೊಲ್ಲಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅರೋಪಿ ಸತ್ಯಾನಾರಾಯಣ
ಪೊಲೀಸ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದೆ,
ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ವಿಶೇಷ ಕಾರ್ಯಾಚರಣೆ ಮಾಡಿ ದೋಷಪೂರಿತ ಕರ್ಕಶ ಶಬ್ದವನ್ನು ಉಂಟು ಮಾಡುವ ಸೈಲೆನ್ಸ ರ್‌ಗಳನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಒಟ್ಟು 380 ದ್ವಿಚಕ್ರ ವಾಹನ ಸವಾರರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಲಂ: 192(2) ಮೋಟಾರು ವಾಹನ ಕಾಯ್ದೆ ಅನ್ವಯ ಒಟ್ಟು 2,52,000 ರೂ ದಂಡ ವಿಧಿಸಲಾಗಿದೆ. ದೋಷಪೂರಿತ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು ಜಿಲ್ಲಾ ಪೊಲೀಸ್ ಕಛೇರಿಯ ಡಿ.ಎ.ಆರ್. ಕವಾಯತ್ ಮೈದಾನದಲ್ಲಿ ರೋಡ್ ರೋಲರ್ ಹಾಯಿಸಿ ನಾಶಪಡಿಸಲಾಯಿತು.
2022 ನೇ ಸಾಲಿಯಲ್ಲಿ 306 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, 2023 ನೇ ಸಾಲಿನಲ್ಲಿ 267 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಎಸ್‌ಪಿ ಶಿವುಕುಮಾರ ಹೆಚ್ಚುವರಿ ಎಎಸ್.ಪಿ, ಹರೀಶ, ಡಿಎಸ್‌ಪಿ ಸತ್ಯನಾರಾಯಣ ರಾವ್, ವಿವಿಧ ಪೋಲಿಸ್ ಠಾಣೆಗಳ ಸಿಪಿಐ, ಪಿಎಸ್‌ಐ ಸಿಬ್ಬಂದಿಗಳು ಇದ್ದರು.