ಅಮೋಘ ನ್ಯೂಸ್ ಡೆಸ್ಕ್ :ಭಾರತದಲ್ಲಿ ಡಿಜಿಟಲ್ ಪಾವತಿ ವಿಚಾರದಲ್ಲಿ ಕ್ರಾಂತಿಯನ್ನೇ ಮಾಡಲಾಗಿದೆ. ಇದು ಸಣ್ಣ ಪುಟ್ಟ ವ್ಯಾಪಾರ ವ್ಯವಹಾರ ಮಾಡುವವರು ಕೂಡ ಒಂದೇ ಒಂದು ರೂಪಾಯಿ ಕ್ಯಾಶ್ ವ್ಯವಹಾರ ಮಾಡದೆ ಮೊಬೈಲ್ ಮೂಲಕ ಪೇಮೆಂಟ್ ಮಾಡುತ್ತಾರೆ. ಯುಪಿಐ ಪೇಮೆಂಟ್ ಬಹಳ ಸಹಾಯಕಾರಿಯಾಗಿದೆ.
ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಆಧಾರಿತ ಥರ್ಡ್ ಪಾರ್ಟಿ ಪೇಮೆಂಟ್ ಅಪ್ಲಿಕೇಶನ್ ಆಗಿರುವ ಗೂಗಲ್ ಪೇ , ಫೋನ್ ಪೇ, ಪೇಟಿಎಂ ಮೊದಲಾದ ಪೇಮೆಂಟ್ ಅಪ್ಲಿಕೇಶನ್ ಗಳನ್ನು ನಾವು ಹೆಚ್ಚಾಗಿ ಬಳಸುತ್ತಿದ್ದೇವೆ.
ಇಂದು ಒಂದೇ ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಬಹು ಬ್ಯಾಂಕ್ ಗಳ ಪೇಮೆಂಟ್ ಗಳನ್ನು ಮಾಡಲು NPCI ಅವಕಾಶ ಮಾಡಿಕೊಟ್ಟಿದೆ. 2016 ರಿಂದ ಆರಂಭವಾದ ಯುಪಿಐ ಬಳಕೆ ಇಂದು ಬಹಳ ವಿಸ್ತಾರವಾಗಿ ಇಡೀ ದೇಶಾದ್ಯಂತ ಪ್ರತಿಯೊಬ್ಬರು ಕೂಡ ವ್ಯವಹಾರ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದೆ
ಆರ್ ಬಿ ಐ ಹೊಸ ರೂಲ್ಸ್!
ಯುಪಿಐ ಪೇಮೆಂಟ್ ನಲ್ಲಿ ಇರುವ ಲೋಪ ದೋಷಗಳನ್ನು ಸರಿಪಡಿಸುವ ಸಲುವಾಗಿ ಹಾಗೂ ಪೇಮೆಂಟ್ ವಿಚಾರದಲ್ಲಿ ಯಾವುದೇ ವಂಚನೆಯೂ ಆಗಬಾರದು ಎನ್ನುವುದಕ್ಕಾಗಿ ಭಾರತೀಯರ ರಿಸರ್ವ್ ಬ್ಯಾಂಕ್ ಜನವರಿ 1, 2024ಕ್ಕೆ ಹೊಸ ಪೇಮೆಂಟ್ ನಿಯಮವನ್ನು ಜಾರಿಗೆ ತಂದಿದೆ. ಯಾವೆಲ್ಲ ರೂಲ್ಸ್ ಹೊಸದಾಗಿ ಜಾರಿಗೆ ತರಲಾಗಿದೆ? ಹಾಗೂ ಯಾರಿಗೆ ಪ್ರಯೋಜನ ಸಿಗಲಿದೆ ಎಂಬುದನ್ನು ನೋಡೋಣ.
ಪ್ರತಿದಿನ ಯುಪಿಐ ಮೂಲಕ ಪೇಮೆಂಟ್ ಮಾಡುವವರಿಗೆ ಒಂದು ಮಿತಿಯನ್ನು ವಿಧಿಸಲಾಗುತ್ತದೆ. ಈಗ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಈ ಮಿತಿಯನ್ನು ಹೆಚ್ಚಿಸಲಾಗಿದೆ. ಈಗ ದಿನಕ್ಕೆ 5 ಲಕ್ಷಗಳ ವರೆಗೆ ಹಣಕಾಸಿನ ವ್ಯವಹಾರ ಮಾಡಬಹುದಾಗಿದೆ.
*ಯುಪಿಐ ಬಳಕೆದಾರರಿಗೆ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಸೌಲಭ್ಯ ನೀಡಲಾಗುತ್ತಿದೆ ಅಂದರೆ ಇಲ್ಲದೆ ಇದ್ದರೂ ಪಾವತಿ ಮಾಡಲು ಸಾಧ್ಯವಿದೆ ಆದರೆ ಇದಕ್ಕೂ ಕೂಡ ಮಿತಿ ವಿಧಿಸಲಾಗಿದೆ. ಇದು ಯಾವುದೇ ವೈಯಕ್ತಿಕ ವ್ಯವಹಾರಕ್ಕೆ ಹಾಗೂ ವ್ಯಾಪಾರಕ್ಕೆ ಬಳಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಇನ್ಮುಂದೆ ಆಸ್ತಿ ಮಾರಾಟ, ಖರೀದಿ ಹಾಗೂ ನೋಂದಣಿಗೆ ಹೊಸ ರೂಲ್ಸ್! ಇಲ್ಲಿದೆ ಮಾಹಿತಿ
ನಿಮ್ಮ ಬಳಿ ಎಟಿಎಂ ಕಾರ್ಡ್ ಇಲ್ಲದೆ ಇದ್ದರೂ ಎಟಿಎಂ ಸೆಂಟರ್ ಗಳಲ್ಲಿ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಈಗ ಹಣ ಹಿಂಪಡೆಯಬಹುದು.
ಯುಪಿಐ ಮೂಲಕ ಮೊದಲ ಬಾರಿಗೆ ಪೇಮೆಂಟ್ ಮಾಡುವವರಿಗೆ, ನಾಲ್ಕು ಗಂಟೆಗಳ ಕೂಲಿಂಗ್ ಅವಧಿಯನ್ನು ನೀಡಲಾಗುತ್ತಿದೆ. ಅಂದ್ರೆ ಮೊದಲ ಬಾರಿಗೆ ಎರಡು ಸಾವಿರ ರೂಪಾಯಿಗಳವರೆಗಿನ ಪೇಮೆಂಟ್ ಮಾಡುವಾಗ ಯಾವುದೇ ಸಮಸ್ಯೆ ಆದರೆ ನಾಲ್ಕು ಗಂಟೆಗಳ ಅವಧಿಯಲ್ಲಿ ಆ ಪೇಮೆಂಟ್ ಕ್ಯಾನ್ಸಲ್ ಮಾಡಿಕೊಳ್ಳುವಂತೆ ಗ್ರಾಹಕರಿಗೆ ಆರ್‌ಬಿಐ ಅವಕಾಶ ನೀಡಿದೆ.
ಯುಪಿಐ ಮೂಲಕ ಪ್ರತಿದಿನ ಪೇಮೆಂಟ್ ಮಾಡುತ್ತಿದ್ದರೆ, ಈ ಕೆಲವು ಹೊಸ ನಿಯಮಗಳನ್ನು ತಿಳಿದುಕೊಳ್ಳಬೇಕು ಇದರಿಂದ ಪ್ರತಿಬಾರಿಯ ಪೇಮೆಂಟ್ ಗೆ ಸಹಾಯವಾಗುತ್ತದೆ.