ಸಿಂಧನೂರು- ನಗರದ ಒಳಬಳ್ಳಾರಿ ರಸ್ತೆಯ ಕಾರುಣ್ಯಾಶ್ರಮ ಅಂತರದಲ್ಲಿ ಹೊಲದ ದನದ ಶೆಡ್ ಆಕಸ್ಮಿಕ ಅಗ್ನಿ ಅವಘಡದಿಂದ ನಾಲ್ಕು ಹಸು, ನಾಲ್ಕು ಎಮ್ಮೆ ಒಟ್ಟು ಎಂಟು ಪ್ರಾಣಿಗಳು ಸಜೀವ ದಹನ ಹಾಗೂ ಮೇವು (ಜೋಳದ ಸೊಪ್ಪೆ ) ಸುಟ್ಟು ಭಸ್ಮ ವಾಗಿದೆಂದು ತಿಳಿದುಬಂದಿದೆ.
ಗುರುವಾರ ತಡ ರಾತ್ರಿ ನಗರದ ಮೂವತ್ತನೇ ವಾರ್ಡ್ ನಿವಾಸಿ ಈರಪ್ಪ ಎಂಬಾತನಿಗೆ ಸೇರಿದ ಶೆಡ್ ಇದಾಗಿದ್ದು ಇದರಲ್ಲಿ ನಾಲ್ಕು ಆಕಳು, ನಾಲ್ಕು ಎಮ್ಮೆ ಗಳನ್ನು ಕಟ್ಟಿ ಹಾಕಿ ಮೇವು ಹಾಕಿ ರಾತ್ರಿ ಸಿಂಧನೂರಿನಲ್ಲಿ ಮನೆಗೆ ಹೋಗಿದ್ದಾನೆ ಆದರೆ ಕಾರಣ ತಿಳಿದುಬಂದಿಲ್ಲ ಮದ್ಯರಾತ್ರಿ ೧ ಗಂಟೆಗೆ ಆಕಸ್ಮಿಕ ಬೆಂಕಿ ಹತ್ತಿದೆ ಪಕ್ಕದ ಹೊಲದಲ್ಲಿದ್ದ ಯಮನೂರು ಎಂಬಾತ ದೂರವಾಣಿ ಕರೆ ಮಾಡಿ ತಿಳಿಸಿದ ಮೇಲೆ ೩-೪೦ ಸಮಯಕ್ಕೆ ಮಾಲಿಕ ಬಂದಾಗ ಪ್ರಾಣಿಗಳೆಲ್ಲಾ ತಮ್ಮ ಹಗ್ಗಗಳನ್ನು ಕಿತ್ತಿಕೊಂಡು ಓಡಾಡಿ, ಚಿರಾಡಿ ಕೊನೆಗೆ ಬೆಂಕಿಯಲ್ಲಿ ಸುಟ್ಟು ಹೋಗಿವೆ.ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದವರು ಬೆಂಕಿ ನಂದಿಸಿದ್ದಾರೆ ಆದರೆ ಅಷ್ಟೊತ್ತಿಗೆ ಪ್ರಾಣಿಗಳೆಲ್ಲಾ ಸುಟ್ಟು ಭಸ್ಮ ವಾಗಿವೆ. ನಂತರ ಸ್ಥಳಕ್ಕೆ ತಾಲೂಕ ಪಶು ವೈದ್ಯಾಧಿಕಾರಿ ಬೇಟಿ ನೀಡಿ ವರದಿ ತೆಗದುಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಪಂಪನಗೌಡ ಬಾದರ್ಲಿ, ಬಾಬುಗೌಡ ಬಾದರ್ಲಿ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.