ರಾಯಚೂರು. ಕೃಷ್ಣಾ ನದಿಗೆ ಹೊಸ ಸೇತುವೆ ನಿರ್ಮಾಣಕ್ಕೆ ಕಾಮಗಾರಿ ಆರಂಭವಾಗಿದ್ದು, ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ನದಿಯಲ್ಲಿ ವಿಷ್ಣುವಿನ ಹಳೇ ಮೂರ್ತಿಗಳು ಹಾಗೂ ಶಿವಲಿಂಗ ಪತ್ತೆಯಾಗಿವೆ.
ತಾಲೂಕಿನ ದೇವಸೂಗುರು ಹತ್ತಿರದಲ್ಲಿ ಕೃಷ್ಣ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ, ಕಾಮಗಾರಿಯು ನಡೆಯುತ್ತಿದ್ದ ವೇಳೆ ಹಳೆಯ ವಿಷ್ಣುವಿನ ಶಂಖ ಚಕ್ರ ಹಿಡಿದುಕೊಂಡಿರುವ ವಿಗ್ರಹಗಳು ಪತ್ತೆಯಾಗಿದ್ದು, ಈ ವಿಗ್ರಹಗಳದ ಸುತ್ತಲೂ ವಿಷ್ಣುವಿನ ವಿವಿಧ ದಶಾವತಾರಗಳನ್ನು ಕೆತ್ತನೆ ಮಾಡಲಾಗಿದೆ. ಇದು ಶಿಲಾ ವಿಗ್ರಹದ ಜೊತೆಗೆ ಶಿವಲಿಂಗವೂ ಸಹ ಕೂಡ ಪತ್ತೆಯಾಗಿರುವುದು ವಿಶೇಷ ವಾಗಿದೆ.
ಈ ವಿಗ್ರಹಗಳು ಅಲ್ಲಲ್ಲಿ ಮುಕ್ಕು ಆಗಿದ್ದರಿಂದ ನದಿಗೆ ಹಾಕಿರಬಹುದು ಎನ್ನಲಾಗುತ್ತಿದೆ.
ಈ ವಿಗ್ರಹಗಳು ಪತ್ತೆಯಾಗಿದ್ದು, ಸ್ಥಳೀಯ ಜನರು ಪೂಜೆ ಮಾಡಿದ್ದಾರೆ, ಮೂರ್ತಿಗಳನ್ನು ನದಿ ಪಾತ್ರದಲ್ಲಿರಿಸಿ ಸ್ಥಳೀಯರು, ಸಿಬ್ಬಂದಿ ಪೂಜೆ ಮಾಡಿದ್ದಾರೆ. ಈ ಮೂರ್ತಿಗಳ ಬಗ್ಗೆ ಪುರಾತತ್ವ ಇಲಾಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.