ರಾಯಚೂರು. ಸರ್ಕಾರ ಕೆಲ ಜಿಲ್ಲೆಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದ್ದು, ಉಳಿದ ಜಿಲ್ಲೆಗಳ ಅಭಿವೃದ್ಧಿಯನ್ನು ಮರೆತಿದ್ದಾರೆ, ರಾಯಚೂರು ಜಿಲ್ಲೆಯನ್ನು ಪ್ರತೇಕ ರಾಜ್ಯವನ್ನಾಗಿ ಮಾಡಿದರೆ ಅಭಿಯಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಪಾರಸಮಲ್ ಸುಖಾಣಿ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಹೇಳುತ್ತಿದ್ದ, ಅದು ಹೆಸರಿಗೆ ಮಾತ್ರ ಸೀಮಿತವಾಗಿದೆ, ಬೆಳವಣಿಗೆ ಮಾಡೋದಕ್ಕೆ ಕೇವಲ ಆರು ಜಿಲ್ಲೆಗೆ ಮಾತ್ರ ಮೈಸೂರು, ಬೆಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಾತ್ರ ಎಂದು ಸರ್ಕಾರದ ವಿರುದ್ಧ ಹರಿ ಹಾಯ್ದರು.
ರಾಜ್ಯದ ಈ 6 ಜಿಲ್ಲೆಗಳಿಗೆ ಮಾತ್ರ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ, ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್ ನಲ್ಲಿ ಜಿಲ್ಲೆಗೆ ಏನೂ ನೀಡುವುದಿಲ್ಲ, ಈ ಭಾಗದಲ್ಲಿ ಕಲಬುರಗಿಗೆ ಮಾತ್ರ ನೀಡುತ್ತಾರೆ ನಮಗೇನು ಸಿಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ್ದು, ಸಂಸದ ಡಿಕೆ ಸುರೇಶ ಅವರು ಸರ್ಕಾರದ ವಿರುದ್ಧ ಆಕ್ರೋಶ ವಾಗಿ ಮಾತನಾಡಿದರು,
ಕೇವಲ ಉತ್ತರ ಭಾರತಕ್ಕೆ ಮಾತ್ರ ಅನುದಾನ ನೀಡುತ್ತಿದ್ದು, ದಕ್ಷಿಣ ಭಾರತಕ್ಕೆ ಅನುದಾನ ನೀಡಿಲ್ಲ ಪ್ರತೇಕ ದಕ್ಷಿಣ ಭಾರತ ರಾಷ್ಟ್ರ ಮಾಡುತ್ತೇವೆಂದು ಹೇಳಿದ್ದರೂ ನಾವು ಸಹ ನಮ್ಮ ಭಾಗಕ್ಕೆ ಅನ್ಯಾಯವಾಗಿದೆ, ರಾಯಚೂರು ಪ್ರತೇಕ ರಾಜ್ಯ ಮಾಡುತ್ತೇವೆ ಎಂದು ತಿಳಿಸಿದರು.