ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸಚಿವರು ಸ್ಪರ್ಧೆ ಮಾಡಿದ್ರೆ ಮಾತ್ರ ಗೆಲುವು ಸಿಗಲಿದೆ ಎಂದು ಎಐಸಿಸಿಗೆ ಕೆಪಿಸಿಸಿ ಸೀಕ್ರೆಟ್ ರಿಪೋರ್ಟ್ ಸಲ್ಲಿಸಿದೆ. ಈ ಹಿನ್ನಲೆಯಲ್ಲಿ 6 ರಿಂದ 8 ಸಚಿವರ ಲೋಕ ಸಮರಕ್ಕೆ ಅಖಾಟಕ್ಕೆ ಧುಮುಕೋದು ಖಚಿತವಾಗಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ಧಾರಕ್ಕೆ ಕೆಲ ಸಚಿವರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋದ್ರಿಂದ ಕನಿಷ್ಠ 20 ಸ್ಥಾನ ಗೆಲ್ಲಬೇಕೆಂದು ರಾಜ್ಯ ಕಾಂಗ್ರೆಸ್ ಗೆ ಎಐಸಿಸಿ ಸೂಚನೆ ನೀಡಿದೆ. 20 ಸ್ಥಾನ ಗೆಲ್ಲಬೇಕಾದರೆ,
6 ರಿಂದ 8 ಸಚಿವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಚರ್ಚೆಗಳು ನಡೆದಿದ್ವು.ಇದಕ್ಕೆ ಪೂರಕವಾಗಿ ಕೆಲ ಸಚಿವರು ನಾನು ಸ್ಪರ್ಧೆ ಮಾಡಲ್ಲ.ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಕೆಲ ಸಚಿವರು ಲೋಕಸಭೆಗೆ ಸ್ಪರ್ಧೆ ಮಾಡಲು ಹಿಂದೇಟು ಹಾಕಿದ್ದರು.ಆದ್ರೆ,ಇದೀಗ ಎಐಸಿಸಿಗೆ ಕೆಪಿಸಿಸಿ ಸೀಕ್ರೆಟ್ ರಿಪೋರ್ಟ್ ಸಲ್ಲಿಸಿದ್ದು, ಸಚಿವರು ಸ್ಪರ್ಧೆ ಮಾಡಿದ್ರೆ ಮಾತ್ರ ಲೋಕ ಸಮರದಲ್ಲಿ ನಾವು ಗೆಲ್ಲಲು ಸಾಧ್ಯ ಎಂದು ರಿಪೋರ್ಟ್ ಸಲ್ಲಿಸಲಾಗಿದೆ. ಇನ್ನು ರಾಜ್ಯದಲ್ಲಿ ಸುಭದ್ರ ಸರ್ಕಾರ ಇರೋದ್ರಿಂದ ಸಚಿವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರಾಸಕ್ತಿ ತೋರಿದ್ದಾರೆ.