ಚೆನ್ನೈ: ಪ್ರಾಚೀನ ತಮಿಳು ಇತಿಹಾಸದ ಮರು ಆವಿಷ್ಕಾರದ ಉದ್ದೇಶದಿಂದ ರಾಯಚೂರಿನ ಮಸ್ಕಿ ಸೇರಿದಂತೆ ನೆರೆ ರಾಜ್ಯಗಳ 4 ಪ್ರದೇಶಗಳ ಲ್ಲಿ ಉತ್ಖನನ ಕೈಗೆತ್ತಿಕೊಳ್ಳಲಾಗುವುದು ಎಂದು ತಮಿಳುನಾಡು ಸರಕಾರ ಘೋಷಿಸಿದೆ.
ಕೇರಳದ ಮುಸಿರಿ, ಒಡಿಶಾದ ಪಾಲೂರು, ಆಂಧ್ರ ದ ವೆಂಗಿ ಮತ್ತು ಕರ್ನಾಟಕದ ಮಸ್ಕಿಯಲ್ಲಿ ಪುರಾತತ್ವ ಉತ್ಖನನ ನಡೆಸಲಿದ್ದೇವೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಇದೇ ವೇಳೆ, ಕರ್ನಾಟಕದ ಗಡಿಯಲ್ಲಿರುವ ಹೊಗೇನಕಲ್ ಮತ್ತು ಪೂಂಪುಹಾರ್ ಪ್ರವಾ ಸೋದ್ಯಮ ಅಭಿವೃದ್ಧಿಗೆ 55 ಕೋಟಿ ರೂ. ಅನುದಾನ ಮೀಸಲಿಡುವುದಾಗಿಯೂ ಸಚಿವ ಥೆನ್ನರಸು ಘೋಷಿಸಿದ್ದಾರೆ. ಜತೆಗೆ 7,890 ಕೋಟಿ ರೂ. ವೆಚ್ಚದಲ್ಲಿ ಹೊಗೇನಕಲ್ ಸಂಯೋಜಿತ ನೀರು ಪೂರೈಕೆ ಯೋಜನೆಯ ಎರಡನೇ ಹಂತವನ್ನು ಕೈಗೆತ್ತಿಕೊಳ್ಳಲಾಗುವುದು ಎಂದಿದ್ದಾರೆ.