ರಾಯಚೂರು. ಭಾರತೀಯ ಜನತಾ ಪಾರ್ಟಿಯ ಜಿಲ್ಲೆಯ ವಿವಿಧ ಮಂಡಲಗಳ ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿ ಶಾಸಕ ಹಾಗೂ ಬಿಜೆಪಿ ಜಿಲ್ಲಾದ್ಯಕ್ಷ ಎಸ್ ಶಿವರಾಜ್ ಪಾಟೀಲ್ ಅವರು ಆದೇಶಿಸಿದ್ದಾರೆ.
ರಾಯಚೂರು ನಗರಾಧ್ಯಕ್ಷರಾಗಿ ವಿ.ರಾಘ ವೇಂದ್ರ, ರಾಯಚೂರು ಗ್ರಾಮೀಣಾಧ್ಯಕ್ಷರಾಗಿ ಶಂಕರಗೌಡ ಮಿರ್ಜಾಪೂರ, ಮಾನವಿ ತಾಲೂಕ ಅಧ್ಯಕ್ಷರಾಗಿ ದೇವರಾಜ ಗೌಡ, ದೇವದುರ್ಗ ತಾಲೂಕ ಅಧ್ಯಕ್ಷರಾಗಿ ಜಂಬಣ್ಣ ನೀಲಗಲ್, ಮಸ್ಕಿ ತಾಲೂಕಾಧ್ಯಕ್ಷರಾಗಿ ಶರಣ ಬಸವರಾಜ, ಸಿಂಧನೂರು ನಗರಾಧ್ಯಕ್ಷರಾಗಿ ಮಲ್ಲಿಕಾರ್ಜುನ ಜೀನೂರು, ಸಿಂಧನೂರು ಗ್ರಾಮೀಣಾಧ್ಯಕ್ಷರಾಗಿ ವೆಂಕೋಬಾ ನಾಯಕ ರಾಮತ್ನಾಳ, ಲಿಂಗಸೂಗುರು ತಾಲೂಕಾಧ್ಯಕ್ಷರಾಗಿ ಅಯ್ಯಪ್ಪ ಮಳೋರು ಅವರನ್ನು ನೇಮಕಗೊಳಿಸಿ ಆದೇಶ ಹೊರಡಿದ್ದಾರೆ.