ರಾಯಚೂರು. ಗ್ರಾಮೀಣ ಠಾಣೆಯ ಪಿಎಸ್ಐ ವಾಹನ ಅಪಘಾತಕ್ಕೀಡಾಗಿ ಚಾಲಕ ಮತ್ತು ಪಿಎಸ್ಐ ಪ್ರಕಾಶ ಡಂಬಳ ಅವರಿಗೆ ಗಾಯಗಳಾ ಗಿರುವ ಘಟನೆ ನಗರದ ಬೈಪಾಸ್ ರಸ್ತೆಯ ಹೊರವಲಯದಲ್ಲಿ ನಡೆದಿದೆ.
ಕಳೆದ ರಾತ್ರಿ ಗಸ್ತಿಗೆ ಹೋಗಿದ್ದ ವೇಳೆ ಬೈಪಾಸ್ ರಸ್ತೆಯಲ್ಲಿ ಎದುರಿಗೆ ವಾಹನವೊಂದು ವೇಗವಾಗಿ ಬರುತ್ತಿದ್ದು ಅದನ್ನ ತಪ್ಪಿಸಲು ಹೋಗಿ ಪೋಲಿಸ್ ವಾಹನದ ಚಾಲಕನ ನಿಯಂತ್ರಣ ತಪ್ಪಿದೆ, ಇದರಿಂದ ವಾಹನ ರಸ್ತೆ ಬಿಟ್ಟು ಹೊಲಕ್ಕೆ ಉರುಳಿದೆ.
ವಾಹನದಲ್ಲಿದ್ದ ಚಾಲಕ ಮತ್ತು ಪಿಎಸ್ಐ ಪ್ರಕಾಶ ಡಂಬಳ ಅವರಿಗೆ ಗಾಯಗಳಾಗಿವೆ, ಪ್ರಾಣಾಪಾ ಯದಿಂದ ಪಾರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಕಾರಣ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸಿಬ್ಬಂದಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಹಾಗೂ ಮಾಹಿತಿ ಪಡೆದು ಕೊಂಡು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.