ರಾಯಚೂರು : ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ಅಂಡರ್ 16 ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಯಚೂರಿನ ಕ್ರಿಕೆಟ್ ಪ್ರತಿಭೆ ಅನಿಕೇತ್ ರೆಡ್ಡಿ ಈಗ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ವಿಶೇಷ ಕೋಚಿಂಗ್‌ಗೆ ಆಯ್ಕೆಯಾಗಿದ್ದಾನೆ.
ವಿಜಯ್ ಮರ್ಚೆಂಟ್ ಟ್ರೋಫಿ ಉಪನಾಯಕ ನಾಗಿ ಆಯ್ಕೆಯಾಗಿದ್ದ ಅನಿಕೇತ್ ರೆಡ್ಡಿ ಟೂರ್ನ ಮೆಂಟ್‌ನ ಐದು ಪಂದ್ಯದಲ್ಲಿ 400 ರನ್ ಬಾರಿಸಿ 10 ವಿಕೆಟ್ ಪಡೆದು ಪ್ರತಿಭೆ ಮೆರೆದಿದ್ದ. ಹೀಗಾಗಿ ಜೈಪುರದಲ್ಲಿ ಏಪ್ರಿಲ್ 18 ರಿಂದ ಮೇ 15 ವರೆಗೆ 27 ದಿನಗಳ ಕಾಲ ನಡೆಯುವ ಎನ್ ಸಿ ಎ ತರಬೇತಿಯಲ್ಲಿ ಭಾಗವಹಿಸಲು ಆಯ್ಕೆಯಾ ಗಿದ್ದಾನೆ.
ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ವಿಕ್ರಂ ಸಿಂಹರೆಡ್ಡಿ ಪುತ್ರ ಅನಿಕೇತ್ ರೆಡ್ಡಿ ಕ್ರಿಕೆಟ್‌ನಲ್ಲಿ ಸಾಧನೆ ಮಾಡುತ್ತಿದ್ದು ಎನ್ ಸಿ ಎ ತರಬೇತಿಗೆ ಆಯ್ಕೆಯಾದ ಹಿನ್ನೆಲೆ ಕಿಲ್ಲೆ ಬೃಹನ್ ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ ಸನ್ಮಾನಿಸಿ ಗೌರವಿಸಿದರು. ಟೀಂ ಇಂಡಿಯಾಗೆ ಆಡುವ ಕನಸು ಹೊತ್ತಿರುವ ಅನಿಕೇತ್ ರೆಡ್ಡಿಗೆ ಶುಭವಾಗಲಿ ಎಂದು ಆಶಿರ್ವದಿಸಿದರು.