ಸಿಂಧನೂರು. ಅವಧಿ ಮುಗಿದ ಔಷಧಿಗಳನ್ನು ನೀಡಿದ್ದರಿಂದ 5 ಕುರಿ ಸಾವನಪ್ಪಿದ್ದು 100 ಕುರಿಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಕೊಪ್ಪಳ ಕ್ಯಾಂಪ್ ನಲ್ಲಿ ನಡೆದಿದೆ.
ಮಸ್ಕಿ ತಾಲೂಕಿನ ರತ್ನಾಪುರಹಟ್ಟಿ ಗ್ರಾಮದ ಹನುಮಂತ ಎಂಬುವರ ಕುರಿಗಳು ಸೇರಿವೆ ಎನ್ನಲಾಗಿದೆ.
ಕುರಿಗಳಿಗೆ ಚಿಕಿತ್ಸೆ ನೀಡಲು ಪಶು ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದು, ಪಶು ವೈದ್ಯ ಡಾ.ಶರಣೇಗೌಡ ಅವಧಿ ಮೀರಿದ ಔಷಧಿಗಳನ್ನು ನೀಡಿದ್ದಾರೆ, ಇದರಿಂದಾಗಿ 5 ಕುರಿಗಳು ಸಾವನಪ್ಪಿದ್ದರೆ 100 ಕುರಿಗಳು ಅಸ್ವಸ್ಥಗೊಂಡಿವೆ, ಈ ಬಗ್ಗೆ ಪಶು ವೈದ್ಯರಿಗೆ ತೋರಿಸಿದರೆ ಉಡಾಫೆ ಉತ್ತರ ನೀಡಿದ್ದಾರೆ.
ಕುರಿಗಾಯಿ ಹನುಮಂತ ತಮ್ಮ 600 ಕುರಿಗಳಿಗೆ ಔಷಧಿ ನೀಡಲು ಪಶು ತಾಲೂಕು ವೈದ್ಯಾಧಿಕಾರಿ ಡಾ. ಶರಣೇಗೌಡ 20 ಲಂಚ ಪಡೆದುಕೊಂಡಿ ದ್ದಾರೆ ಎಂಬ ಆರೋಪಿಸಲಾಗಿದೆ.
ನಿರ್ಲಕ್ಷ್ಯ ವಗಿಸಿದ ಪಶು ವೈದ್ಯರನ್ನು ಅಮಾನತು ಮಾಡಬೇಕು, ಕುರಿಗಳಿಗೆ ಪರಿಹಾರ ಹಾಗೂ ಭದ್ರತೆ ಒದಗಿಸಲು ಒತ್ತಾಯಿಸಿದ್ದಾರೆ.
ಈ ಕುರಿತು ಸಿಂಧನೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Megha News > Crime News > ಅವಧಿ ಮುಗಿದ ಔಷಧಿ ನೀಡಿದ ಪಶು ವೈದ್ಯ, 5 ಕುರಿ ಸಾವು, 100 ಕುರಿ ಅಸ್ವಸ್ಥ
ಅವಧಿ ಮುಗಿದ ಔಷಧಿ ನೀಡಿದ ಪಶು ವೈದ್ಯ, 5 ಕುರಿ ಸಾವು, 100 ಕುರಿ ಅಸ್ವಸ್ಥ
Tayappa - Raichur23/03/2024
posted on
Leave a reply