ರಾಯಚೂರು. ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಬಿ.ವಿ.ನಾಯಕರಿಗೆ ಟಿಕೇಟ್ ನೀಡದೇ ಇರುವುದರಿಂದ ಭಿನ್ನಮತ ಸ್ಫೋಟಗೊಂಡಿದ್ದು, ಖಂಡಿಸಿ ಪ್ರತಿಭಟನೆ ನಡೆಸಿದ್ದರು, ಈ ವೇಳೆ ಕಾರ್ಯಕರ್ತರೊಬ್ಬರು ಮೈಮೇಲೆ ಡೀಸೇಲ್ ಮುರಿದುಕೊಂಡ ಘಟನೆ ನಡೆಯಿತು.
ನಗರದ ಸಂತೋಷ್ ಹಬ್‌ನಲ್ಲಿ ಬಿ.ವಿ.ನಾಯರಿಗೆ ಟಿಕೇಟ್ ತಪ್ಪಿದ್ದರಿಂದ ಅಭಿಮಾನಿಗಳು, ಹಿತೈಷಿಗಳು ಸೇರಿ ಸಭೆ ನಡೆಸಲಾಯಿತು, ಬಳಿಕ ರಸ್ತೆಯಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು, ಈ ವೇಳೆ ಕಾರ್ಯಕರ್ತರೊ ಬ್ಬರು ಮೈಲೇಲೆ ಡೀಸೆಲ್ ಮುರಿದುಕೊಂಡು ಹೈಡ್ರಾಮ್ ನಡೆಸಿದರು.
ರಾಜಾ ಅಮೇಶ್ವರ ನಾಯಕ ಅವರಿಗೆ ಟಿಕೆಟ್ ನೀಡಿದ್ದನ್ನು ಖಂಡಿಸಿ, ಆಕ್ರೋಶ ಹೊರ ಹಾಕಿದರು. ಬಿವಿ.ನಾಯಕರಿಗೆ ಟಿಕೆಟ್ ನೀಡುವುದಾಗಿ ವಂಚಿಸಿದ್ದಾರೆ. ಬೆಂಬಲಿಗರು ಅಸಮಾಧಾನವನ್ನು ಹೊರ ಹಾಕಿದ್ದು, ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ. ರಾಜಾ ಅಮರೇಶ್ವರ ನಾಯಕ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು.
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿ.ವಿ. ನಾಯಕರಿಗೆ ಬಿಜೆಪಿ ಟಿಕೆಟ್ ಕೊಡಬೇಕ ಎಂದು ಆಕ್ರೋಶ ವ್ಯಕ್ತಪಡಿಸಿದರು