ರಾಯಚೂರು. ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಅಗ್ನಿ ಅವಘಡ ನಡೆದ ಘಟನೆ ನಗರದ 220 ಕೆ.ವಿ. ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಹೆಚ್ಚಿನ ತಾಪಮಾನದಿಂದ ವಿದ್ಯುತ್ ಸರಬರಾಜಿನಲ್ಲಿ ಏರುಪೇರಾಗಿ ಬೆಂಕಿ ಹೊತ್ತಿ ಕೊಂಡಿದೆ.ಅಗ್ನಿ ಅವಘಡದಲ್ಲಿ ವಿದ್ಯುತ್ ಪರಿವರ್ತಕಗಳು ಸ್ಪೋಟಗೊಂಡಿವೆ.
ವಿದ್ಯುತ್ ಅವಗಡದಿಂದಾಗಿ ಮೂರು ಟಿಸಿ ಗಳು ಸುಟ್ಟು ಹೋಗಿದ್ದು, ವಿದ್ಯುತ್ ಕೇಂದ್ರದಲ್ಲಿನ ವೈಯರ್‌ಗಳು ಸಂಪೂರ್ಣ ಸುಟ್ಟು ಹೋಗಿವೆ,
ನಗರಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗಿದೆ. ವಿದ್ಯುತ್ ಬಂದ್ ಆಗಿದ್ದರಿಂದ ನಗರ ದಲ್ಲಿ ವಿದ್ಯುತ್ ಇಲ್ಲದೆ ಜನರು ಕತ್ತಲೆಯಲ್ಲಿ ಕಳೆಯುವಂತಾಯಿತು. ಬೇಸಿಗೆ ಇರುವುದರಿಂದ
ವಿಪರೀತ ತಾಪಮಾನ ಹೆಚ್ಚಳವಾಗಿದೆ, ವಿದ್ಯುತ್ ಇಲ್ಲದೆ ರಾತ್ರಿ ನಿದ್ದೆಯೂ ಇಲ್ಲದಂತೆ ಜನರು ಜಾಗರಣೆ ಮಾಡಿದರು.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿಯನ್ನು ನಂದಿಸಿದರು.
ವಿದ್ಯುತ್ ಸಮಸ್ಯೆಯಾಗಿದ್ದರಿಂದ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಜೆಸ್ಕಾಂ ಅಧಿಕಾರಿಗಳು ಮನವಿ ಮಾಡಿದರು.